ಸಂಸತ್​ನಲ್ಲಿ ಭಾರೀ ಭದ್ರತಾ ಲೋಪ: 8 ಲೋಕಸಭಾ ಸಿಬ್ಬಂದಿ ಸಸ್ಪೆಂಡ್

ನವದೆಹಲಿ: ಸಂಸತ್ ಕಲಾಪದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಅಗಂತಕರು ಜಿಗಿದು ಭಾರಿ ಭದ್ರತಾ ಲೋಪ ಉಂಟಾದ ಪ್ರಕರಣಕ್ಕೆ ಸಂಬಂಧಪಟ್ಟತೆ ಎಂಟು ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಈ ಘಟನೆ ಸಂಬಂಧ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಸಾಗರ್ ಶರ್ಮಾ, ಡಿ ಮನೋರಂಜನ್, ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. 22 ವರ್ಷಗಳ ಹಿಂದೆ 2001 ರ ಸಂಸತ್ತಿನ ಭಯೋತ್ಪಾದಕ ದಾಳಿ ನಡೆದ ದಿನದಂದೇ ಸಂಸತ್ತಿನಲ್ಲಿ ಪ್ರಮುಖ ಭದ್ರತಾ ಲೋಪ ನಡೆದಿತ್ತು.

ಈ ನಡುವೆ ಸಂಸತ್ತಿನ ಭದ್ರತೆಯ ಮರು ಪರಿಶೀಲನೆ ಕೋರಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಸಮಗ್ರ ತನಿಖೆಯೂ ನಡೆಯಲಿದೆ.

Comments (0)
Add Comment