ಸಚಿನ್ ಜೊತೆಗಿರುವ ಫೋಟೋಗೆ ‘ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್ಹ್’​ ಎಂದ ಸುದೀಪ್ – ಕಿಚ್ಚನಿಗೆ ಸಚಿನ್ ತೆಂಡೂಲ್ಕರ್ ಸ್ವೀಟ್ ರಿಪ್ಲೈ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ತಮ್ಮ ಬಿಡುವಿನ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರುತ್ತಾರೆ. ‘ಆಸ್ಕ್ ಕಿಚ್ಚ’ ಹ್ಯಾಷ್​ಟ್ಯಾಗ್ ಮೂಲಕ ಅಭಿಮಾನಿಗಳು ತಮಗೆ ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಿರುತ್ತಾರೆ. ಅಂಥಹುದೇ ಒಂದು ಸಂವಾದದಲ್ಲಿ ಕಿಚ್ಚನ ಅಭಿಮಾನಿ ಹೇಮಂತ್ ಶೈವ ಎಂಬಾತ ಸುದೀಪ್ ಹಾಗೂ ಸಚಿನ್ ಅವರು ಒಟ್ಟಿಗಿರುವ ಹಳೆಯ ಚಿತ್ರವನ್ನು ಶೇರ್ ಮಾಡಿ, ‘ನೀವು ಸಚಿನ್ ಅವರನ್ನು ಭೇಟಿಯಾದಾಗ ನಿಮ್ಮ ಒಳಗಿನ ಭಾವನೆ ಹೇಗಿತ್ತು’ ಎಂದು ಪ್ರಶ್ನೆ ಕೇಳಿದ್ದರು.

ಅದಕ್ಕೆ ಉತ್ತರಿಸಿದ್ದ ಸುದೀಪ್, ‘ಈ ಚಿತ್ರ ಅತ್ಯದ್ಭುತ (‘ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್ಹ್’). ಇದೊಂದು ಬಹಳ ಮಧುರವಾದ ನೆನಪು ಗೆಳೆಯ’ ಎಂದಿದ್ದರು. ಕೂಡಲೇ ಸುದೀಪ್​ರ ಟ್ವೀಟ್​ಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್, ‘ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತೋಷದ ವಿಷಯ. ಅಂದು ನಮ್ಮ ಚಿತ್ರವನ್ನು ಬಹಳ ಚೆನ್ನಾಗಿ ಯಾರೋ ತೆಗೆದಿದ್ದಾರೆ. ನಿಮಗೆ ಉತ್ತಮ ಆರೋಗ್ಯ ಮತ್ತು ಜೀವನದಲ್ಲಿ ಸಂತೋಷವನ್ನು ದೇವರು ಕರುಣಿಸಲೆಂದು ಸದಾ ಬಯಸುತ್ತೇನೆ’ ಎಂದಿದ್ದಾರೆ. ಟ್ವೀಟ್ ಅನ್ನು ಹಿಂದಿಯಲ್ಲಿ ಮಾಡಿರುವ ಸಚಿನ್, ಟ್ವೀಟ್​ನಲ್ಲಿ ‘ಕಿಚ್ಚ’ ಎಂಬ ಪದವನ್ನು ಪನ್ ರೀತಿಯಲ್ಲಿ ಬಳಸಿರುವುದು ವಿಶೇಷ. ಸಚಿನ್ ನೀಡಿದ್ದ ಪ್ರತಿಕ್ರಿಯೆಗೆ ಅಚ್ಚರಿ ವ್ಯಕ್ತಪಡಿಸಿರುವ ಸುದೀಪ್, ‘ನಾನು ಇದನ್ನು ನಿರೀಕ್ಷಿಸಿರಲಿಲ್ಲ ಸರ್’ ಎಂದು ಹೇಳಿದ್ದಾರೆ. ಅದ್ಧುತ ಎಂದು ಎರಡು ಲವ್ ಎಮೋಜಿ ಹಾಕಿರುವ ಕಿಚ್ಚ, ಇದನ್ನು ನಿರೀಕ್ಷಿಸಿರಲಿಲ್ಲ. ನೀವು ನನಗೆ ಮತ್ತೊಂದು ಸ್ಮರಣೀಯ ಕ್ಷಣವನ್ನು ಉಡುಗೊರೆಯಾಗಿ ನೀಡಿದ್ದೀರಿ. ನಿಮಗೂ ಸಹ ಆರೋಗ್ಯ ಮತ್ತು ಪ್ರೀತಿಯನ್ನು ಹಾರೈಸುತ್ತೇನೆ ಸಚಿನ್ ಸರ್​ ಎಂದು ತಿಳಿಸಿದ್ದಾರೆ.

Comments (0)
Add Comment