ಸಾಕು ನಾಯಿ ದಾಳಿ: 7ವರ್ಷದ ಬಾಲಕಿ ಮೇಲೆ ಎರಗಿದ ಅಮೇರಿಕನ್ ಬುಲ್

ದೆಹಲಿ: 7 ವರ್ಷದ ಬಾಲಕಿ ಮೇಲೆ  ಅಮೇರಿಕನ್ ಬುಲ್ ಜಾತಿಯ ನಾಯಿಯೊಂದು  ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರೋಹಿಣಿಯ ಸೆಕ್ಟರ್ -25 ನಲ್ಲಿ ನಡೆದಿದೆ.

ಬಾಲಕಿಯೂ ತಾವಿದ್ದ ಸೊಸೈಟಿ ಅವರಣದಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನೆರೆಹೊರೆಯವರ ಮುದ್ದಿನ ಅಮೇರಿಕನ್ ನಾಯಿ ಆಕೆಯ ಮೇಲೆ ಎರಗಿದೆ.

ನೆಲಕ್ಕೆ ಬಿದ್ದ ಬಾಲಕಿ ಎದ್ದು ಓಡಲು ಯತ್ನಿಸಿದಾಗ ಆಕೆಯ ಮೇಲೆ ದಾಳಿ ನಾಯಿ ದಾಳಿ ಮಾಡಿದೆ.ಘಟನೆಯಲ್ಲಿ  ಆಕೆಯ ಕಣ್ಣುಗಳು, ಬಲಗೈ ಸಹಿತ ದೇಹದಲ್ಲಿ 15 ಕ್ಕೂ ಹೆಚ್ಚು ಕಡೆ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಘಟನೆಯ ಕುರಿತು ಬಾಲಕಿ ತಂದೆ ಶ್ರೀಕಾಂತ್ ಭಗತ್ ಅವರ ಪೊಲೀಸ್ ದೂರು ದಾಖಲಿಸಿದ್ದು ನನ್ನ ಮಗಳು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನಮ್ಮ ನೆರೆಹೊರೆಯವರ ನಾಯಿ ಅವಳ ಮೇಲೆ ಏಕಾಏಕಿ ಹಾರಿದೆ.

ಅವಳು ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ ನೆಲದ ಮೇಲೆ ಬಿದ್ದಿದ್ದಾಳೆ. ಆಗ ಮಗಳ ಮೇಲೆ ನಾಯಿ ದಾಳಿ ಮಾಡಿದೆ” ಎಂದು ತಿಳಿಸಿದ್ದಾರೆ.

ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಸಾಕು ಪ್ರಾಣಿ ಮಾಲೀಕನ ವಿರುದ್ಧ ಆಕೆಯ ತಂದೆಯ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 289 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments (0)
Add Comment