ಸಿಇಟಿ-2024 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ನಾಳೆ ಲಾಸ್ಟ್ ಡೇಟ್.!

 

ಬೆಂಗಳೂರು : ದಿನಾಂಕ 18-04-2024 ಮತ್ತು 19-04-2024 ರಂದು ನಡೆಸುವ ಸಿಇಟಿ-2024 ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರಾಧಿಕಾರವು ಹಲವು ಬಾರಿ ದಿನಾಂಕಗಳನ್ನು ವಿಸ್ತರಿಸಲಾಗಿತ್ತು. ಆದರೂ ಇನ್ನೂ ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮನವಿಯನ್ನು ಸಲ್ಲಿಸುತ್ತಿದ್ದಾರೆ.

ಆದ್ದರಿಂದ ದಿನಾಂಕ 30-03-2024 ರ ಬೆಳಿಗ್ಗೆ 11.00 ರಿಂದ 01-04-2024 – ಸಂಜೆ 4.00 ರವರೆಗೆ ನೊಂದಣಿ ಮಾಡಿ ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್ ತೆರೆಯಲಾಗುವುದು ಹಾಗು 01-04-2024 ರ ರಾತ್ರಿ 8.00 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ. ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದೇ ಇರುವ ಅಭ್ಯರ್ಥಿಗಳು ಅಥವಾ ಅರ್ಜಿ ಸಲ್ಲಿಸುವಿಕೆಯನ್ನು ಪೂರ್ಣಗೊಳಿಸದೇ ಇರುವ ಅಥವಾ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳು ಈ ಮೇಲಿನ ದಿನಾಂಕಗಳಂದು ಅರ್ಜಿ ಸಲ್ಲಿಸಬಹುದಾಗಿದೆ ಹಾಗು ಶುಲ್ಕ ಪಾವತಿಸಬಹುದಾಗಿದೆ. ಈ ಮೇಲಿನ ದಿನಾಂಕಗಳಂದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ಸಿಇಟಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.

Comments (0)
Add Comment