‘ಸಿಐಡಿ’ ಧಾರವಾಹಿ ನಟ ದಿನೇಶ್ ಫಡ್ನಿಸ್ ಗೆ ಹೃದಯಾಘಾತ

ಮುಂಬಯಿ: ಹಿಂದಿಯ ಜನಪ್ರಿಯ ಧಾರಾವಾಹಿ ‘ಸಿಐಡಿ’ಯ ನಟ ದಿನೇಶ್ ಫಡ್ನಿಸ್(57) ಅವರಿಗೆ ಡಿ. 1 ರಂದು ಹೃದಯಾಘಾತವಾಗಿದ್ದು, ಮುಂಬೈನ ತುಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ‘ಸಿಐಡಿ’ಯಲ್ಲಿ ದಯಾ ಪಾತ್ರವನ್ನು ನಿರ್ವಹಿಸಿದ ದಯಾನಂದ ಶೆಟ್ಟಿ ಅವರು ಸದ್ಯ ದಿನೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.

‘ಸಿಐಡಿ’ ಧಾರವಾಹಿಯಲ್ಲಿ ಅನೇಕರು ನಟಿಸಿ ಜನಪ್ರಿಯತೆ ಗಳಿಸಿದವರಲ್ಲಿ ನಟ ದಿನೇಶ್ ಫಡ್ನಿಸ್ ಒಬ್ಬರು. ‘ಸಿಐಡಿ’ಯಲ್ಲಿ ಫ್ರೆಡೆರಿಕ್ಸ್ ಎಂಬ ಪಾತ್ರ ನಿರ್ವಹಿಸುತ್ತಿದ್ದ ಅವರು 20 ವರ್ಷಗಳ ಕಾಲ ಸಿಐಡಿಯಲ್ಲಿ ಸರಣಿಯಲ್ಲಿ ನಟಿಸಿದ್ದರು. ಇನ್ನು ದಿನೇಶ್ ಅವರಿ ’ಸಿಐಡಿ’ ಧಾರವಾಹಿ ಅಷ್ಟೇ ಅಲ್ಲದೇ ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ’ ದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

Comments (0)
Add Comment