ಸಿಪ್ಪೆ ಮೇಲೆ ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು

ಬಾಳೆಹಣ್ಣುಗಳಲ್ಲಿ ಕಪ್ಪು ಚುಕ್ಕೆ ಇರಬಹುದು ಆದರೆ ಅವು ನೈಸರ್ಗಿಕವಾಗಿ ಹಣ್ಣಾಗಿರುತ್ತದೆ, ಉಳಿದ ಬಾಳೆಹಣ್ಣಿಗಿಂತ ಹೆಚ್ಚು ಪೋಷಕಾಂಶಗಳು ಮಾತ್ರವಲ್ಲ ಗುಣಲಕ್ಷಣಗಳು 8 ಪಟ್ಟು ಹೆಚ್ಚು ಹೆಚ್ಚಾಗುತ್ತದೆ.

ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣಿನಿಂದ ಸಂಪೂರ್ಣ ಪೋಷಣೆಯನ್ನು ಪಡೆಯಬಹುದು. ಇಂತಹ ಬಾಳೆಹಣ್ಣುಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿರುತ್ತವೆ. ಇದು ಉತ್ಕರ್ಷಣ ನಿರೋಧಕಗಳ ಪ್ರಮಾಣವನ್ನು ಮತ್ತು ಬಿಳಿ ರಕ್ತ ಕಣಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೇ ಬಾಳೆಹಣ್ಣು ತಿಂದರೂ ಗಂಟೆಗಟ್ಟಲೆ ಹಸಿವಾಗುವುದಿಲ್ಲ. ಇದರ ಇತರ ಹಲವು ಪ್ರಯೋಜನಗಳಿವೆ. ಬಾಳೆಹಣ್ಣಿನ ಸಿಪ್ಪೆ ಮೇಲಿನ ಕಪ್ಪು ಕಲೆಗಳು ಹೆಚ್ಚಿನ ಮಟ್ಟದ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ (TNF) ಅನ್ನು ಸೂಚಿಸುತ್ತವೆ.

ಇದು ಕ್ಯಾನ್ಸರ್ ಗೆಡ್ಡೆಗಳನ್ನು ನಾಶ ಮಾಡುವ ಗುಣವನ್ನು ಹೊಂದಿದೆ. TNF ರೋಗ ನಿರೋಧಕ ಶಕ್ತಿ ಮತ್ತು ದೇಹದಲ್ಲಿ ಬಿಳಿ ರಕ್ತಕಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮಾಗಿದ ಬಾಳೆಹಣ್ಣು ಕ್ಯಾನ್ಸರ್​ ತಡೆಯುವ ಗುಣ ಹೊಂದಿದೆ ಎಂಬುವುದನ್ನು ಅಧ್ಯಯನದಲ್ಲಿ ಹೇಳಲಾಗಿದೆ. ಕಪ್ಪು ಚುಕ್ಕೆಯ ಬಾಳೆಹಣ್ಣು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಇದರ ಜೊತೆಗೆ ಮೂಳೆಗಳ ಬಲಪಡಿಸುವಿಕೆ, ರಕ್ತಹೀನತೆ ತಡೆಗಟ್ಟುವಿಕೆ, ತ್ವರಿತ ಶಕ್ತಿಯ ಹೆಚ್ಚಳ ಮಾಡುವ ಕೆಲಸವನ್ನು ಕಪ್ಪು ಚುಕ್ಕೆಯ ಬಾಳೆಹಣ್ಣು ಮಾಡುತ್ತದೆ. ಚುಕ್ಕೆಗಳಿರುವ ಬಾಳೆಹಣ್ಣನ್ನು ತಿನ್ನುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿಡಬಹುದು.ಕಪ್ಪು ಚುಕ್ಕೆಗಳನ್ನು ಹೊಂದಿರುವ ಬಾಳೆಹಣ್ಣುಗಳು ಶುದ್ಧ ಬಾಳೆಹಣ್ಣುಗಳಿಗಿಂತ 8 ಪಟ್ಟು ಹೆಚ್ಚು ಆರೋಗ್ಯಕರವೆಂದು ಜಪಾನಿನ ಸಂಶೋಧಕರು ಕಂಡುಹಿಡಿದಿದ್ದಾರೆ.ಕಪ್ಪು ಚುಕ್ಕೆಯ ಬಾಳೆಹಣ್ಣುಗಳು ಸೇವನೆಗೆ ಆರೋಗ್ಯಕರವಾಗಿದ್ದು, ಯಾವುದೇ ಅಪಾಯವನ್ನು ಉಂಟು ಮಾಡಲ್ಲ. ಅತಿಯಾಗಿ ಮಾಗಿದ ಮತ್ತು ಕೆಟ್ಟ ವಾಸನೆ ಬರುತ್ತಿರುವ ಹಣ್ಣುಗಳನ್ನು ತಿನ್ನಬೇಡಿ

Comments (0)
Add Comment