ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ಹೋಟೆಲ್​ಗಳು ಓಪನ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಜನದಟ್ಟಣೆ ಪ್ರದೇಶವಾಗಿದ್ದರಿಂದ ಇಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅವಕಾಶ ನೀಡಬೇಕು ಎಂದು ಹೋಟೆಲ್ ಮಾಲೀಕರ ಸಂಘದವರ ಬಹು ದಿನದ ಬೇಡಿಕೆ ಈಡೇರುವ ಕಾಲ ಸನಿಹವಾಗಿದೆ. ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ಹೋಟೆಲ್​ಗಳು ತೆರೆಯಲಿವೆ ಎನ್ನುವ ಬಗ್ಗೆ ಗೃಹ ಸಚಿವರಿಂದ ಹೋಟೆಲ್ ಅಸೋಸಿಯೇಷನ್​ಗೆ ಭರವಸೆ ಸಿಕ್ಕಿದೆ.

ಮಧ್ಯರಾತ್ರಿಯ ಸಂದರ್ಭದಲ್ಲಿ ಊಟ- ತಿಂಡಿ ಸರಿಯಾಗಿ ಸಿಗದೇ ಪರದಾಡುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ‌ಈ‌ ಕಾರಣದಿಂದಾಗಿ ಹೋಟೆಲ್ ಅಸೋಸಿಯೇಷನ್ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯುವಂತೆ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸುತ್ತಲೇ ಬಂದಿದೆ.‌ ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಮಾತ್ರ ಇವರ ಬೇಡಿಕೆಗೆ ಸ್ಪಂದಿಸಿರಲಿಲ್ಲ.‌ ಇದೀಗಾ ಕಾಂಗ್ರೆಸ್ ಸರ್ಕಾರ ಈ ಬೇಡಿಕೆಯನ್ನ ಇಡೇರಿಸುವ ಭರವಸೆ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಾರ್ಗಸೂಚಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯ ಕೇರಳದಲ್ಲಿ ದಿನದ 24 ಗಂಟೆಗಳ‌ ಕಾಲ ಹೋಟೆಲ್‌ ತೆರೆಯಲು ಅನುಮತಿ ಇದೆ. ಅದರಂತೆ ನಮ್ಮ ಸರ್ಕಾರಕ್ಕೂ ಬೇಡಿಕೆ ಇಟ್ಟಿದ್ದೀವಿ.‌ ಸರ್ಕಾರ ಭರವಸೆ ಕೊಟ್ಟಿದೆ. ಆ ಭರವಸೆ ಕಾರ್ಯರೂಪಕ್ಕೆ ಬಂದಿದ್ದೆ ಆದಾಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಹೋಟಲ್ ಮಾಲೀಕರು ಹೇಳಿದ್ದಾರೆ. 24 ಗಂಟೆಗಳ ಕಾಲ‌ ಹೊಟೇಲ್ ಓಪನ್ ಮಾಡುವುದಕ್ಕೆ ಅನುಮತಿಯನ್ನ ನೀಡಿದ್ರು ಕೂಡ ಟಫ್ ರೂಲ್ಸ್ ಗಳನ್ನ ಜಾರಿ ಮಾಡುವ ಸಾಧ್ಯತೆ ಇದೆ.‌ ಹೋಟೆಲ್ ಗಳಿಗೆ 10 ರಿಂದ 20 % ಲಾಭದ ಜೊತೆಗೆ 10 ರಿಂದ 20 ಸಾವಿರ ಉದ್ಯೋಗವು ಸೃಷ್ಟಿಯಾಗಲಿದೆ.

Comments (0)
Add Comment