ಸೀರೆಯುಟ್ಟ ಅಲ್ಲು ಅರ್ಜುನ್ ನ ಹೊಸ ಲುಕ್ ವೈರಲ್

ಹೈದರಾಬಾದ್:ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಹಿಟ್ ಆದ ಬೆನ್ನಲ್ಲೇ ಇದೀಗ ಪುಷ್ಟ – 2 ಮತ್ತಷ್ಟು ಕ್ರೇಜ್ ಹೆಚ್ಚಿಸಿದೆ.

ಪುಷ್ಪ’ ಸಿನಿಮಾ ದೊಡ್ಡ ಹಿಟ್ ಆಗಿದ್ದು ಮಾತ್ರವಲ್ಲ ಅಲ್ಲು ಅರ್ಜುನ್ ಗೆ ರಾಷ್ಟ್ರಪ್ರಶಸ್ತಿಯನ್ನು ಕೂಡ ತಂದುಕೊಟ್ಟಿತು. ಹೀಗಾಗಿ ಪುಷ್ಪ -2 ಸಿನಿಮಾದ ಮೇಲೆ ಸಿನಿ ಪ್ರೇಮಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು ಬಹಳಷ್ಟು ಜಾಗ್ರತೆ ವಹಿಸಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಬಿಡುಗಡೆ ದಿನಾಂಕ, ಒಂದು ಟೀಸರ್, ಒಂದು ಲುಕ್ ಅಷ್ಟೆ ಬಹಿರಂಗಗೊಂಡಿದೆ.

ಇದೀಗ ಸಿನಿಮಾ ಸೆಟ್ ನ ಚಿತ್ರವೊಂದು ಲೀಕ್ ಆಗಿದೆ.‘ಪುಷ್ಪ’ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಈ ಹಿಂದೆ ಬಿಡುಗಡೆ ಮಾಡಿತ್ತು, ಅಲ್ಲು ಅರ್ಜುನ್ ಕಾಳಿಕಾ ಮಾತೆಯಂತೆ ವೇಷ ಧರಿಸಿದ್ದ ಚಿತ್ರವದು.ಆ ಲುಕ್ ಸಖತ್ ವೈರಲ್ ಆಗಿತ್ತು. ಜೊತೆಗೆ ಕುತೂಹಲವನ್ನೂ ಸಹ ಕೆರಳಿಸಿತ್ತು. ಇದೀಗ ‘ಪುಷ್ಪ’ ಸೆಟ್ ನಿಂದ ಚಿತ್ರವೊಂದು ವೈರಲ್ ಆಗಿದೆ.

ಸೀರೆಯುಟ್ಟು ಅಲ್ಲು ಅರ್ಜುನ್ ಕುರ್ಚಿಯ ಮೇಲೆ ಕುಳಿತ ಚಿತ್ರ ವೈರಲ್ ಆಗಿದ್ದು, ಆ ಚಿತ್ರವನ್ನು ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.‘ಪುಷ್ಪ 2’ ಸಿನಿಮಾದ ಸೆಟ್ ನ ಚಿತ್ರಗಳು ಹೊರಬರದಂತೆ ಚಿತ್ರ ತಂಡ ಹಲವು ಎಚ್ಚರಿಕೆಗಳನ್ನು ತೆಗೆದುಕೊಂಡಿತ್ತು.ಹಾಗಿದ್ದರೂ ಸಹ ಇದೀಗ ಅಲ್ಲು ಅರ್ಜುನ್ರ ಚಿತ್ರವೊಂದು ಲೀಕ್ ಆಗಿದೆ.

Comments (0)
Add Comment