ಸುಪ್ರೀಂ ಕೋರ್ಟ್: ರೋಹಿಣಿ ಸಿಂಧೂರಿ ವಿರುದ್ದದ ಪೋಸ್ಟ್‌ ಡಿಲೀಟ್ ಮಾಡಲು ಆದೇಶ

ಹೊಸದೆಲ್ಲಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಡಿಲೀಟ್ ಮಾಡಲು ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

2023ರ ಫೆ.14 ಹಾಗೂ 16 ರಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದರು. ಈ ಆರೋಪಗಳು ಕೀಳು ಅಭಿರುಚಿಯಿಂದ ಕೂಡಿದ್ದವು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ರೋಹಿಣಿ ಸಿಂಧೂರಿ ಈ ವಿಚಾರವಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಇದೀಗ ಈ ಕುರಿತಾಗಿ ಅಂತಿಮವಾಗಿ ತನ್ನ ತೀರ್ಮಾನ ಪ್ರಕಟಿಸಿದ ಸರ್ವೋಚ್ಛ ನ್ಯಾಯಾಲಯ, ನಾಳೆಯ ಒಳಗಾಗಿ ರೋಹಿಣಿ ಸಿಂಧೂರಿ ವಿರುದ್ಧದ ಆಕ್ಷೇಪಾರ್ಹ ಪೋಸ್ಟ್‌ ಡಿಲೀಟ್ ಮಾಡಿ, ಇಲ್ಲವಾದ್ರೆ ಪೋಸ್ಟ್‌ ಹಿಂಪಡೆಯಲಾಗಿದೆ ಎಂದು ಸಂದೇಶ ಪ್ರಕಟಿಸಿ ಎಂದು ಡಿ. ರೂಪಾ ಅವರಿಗೆ ಸೂಚನೆ ನೀಡಿದೆ.

Comments (0)
Add Comment