ಸುಳ್ಳು ಜಾಹೀರಾತು: ಸುಪ್ರೀಂ ಮುಂದೆ ಕ್ಷಮೆ ಕೇಳಿದ ರಾಮ್‌ದೇವ್‌

ನವದೆಹಲಿ: ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಗುರುವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಪ್ಪು ದಾರಿ ಗೆಳೆಯುವ ಜಾಹೀರಾತುಗಳಿಗಾಗಿ ಕ್ಷಮೆ ಕೋರಿದ್ದಾರೆ.

ಅಲ್ಲದೇ ಆಯುರ್ವೇದದ ಮೂಲಕ ಜೀವನಶೈಲಿ ಸಂಬಂಧಿತ ವೈದ್ಯಕೀಯ ತೊಡಕುಗಳಿಗೆ ಪರಿಹಾರಗಳನ್ನು ಒದಗಿಸುವ ಮೂಲಕ ದೇಶದ ಆರೋಗ್ಯ ಮೂಲಸೌಕರ್ಯದ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಪತಂಜಲಿಯ ಅನ್ವೇ ಷಣೆಯಾಗಿದೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಭವಿಷ್ಯದಲ್ಲಿ ಇಂತಹ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕಂಪನಿಯು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಶೋಕಾಸ್ ನೋಟಿಸ್ ನೀಡಿದ್ದು ಅಲ್ಲದೆ ಎರಡು ವಾರಗಳ ಒಳಗೆ ಖುದ್ದು ಹಾಜರಾಗುವಂತೆ ಯೋಗ ಗುರು ಬಾಬಾ ರಾಮದೇವ್‌ ಮತ್ತುಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಲಯ ಸೂಚಿಸಿತ್ತು
ಈ ವಿದ್ಯಮಾನ ನಡೆದ ಎರಡು ದಿನಗಳ ಬಳಿಕ ತನ್ನ ತಪ್ಪಿನ ಕುರಿತು ಸುಪ್ರೀಂ ಕೋರ್ಟ್‌ಗೆ ಪತಂಜಲಿ ಕ್ಷಮೆಯಾಚಿಸಿದ್ದಾರೆ.

ಫೆಬ್ರವರಿ 27 ರಂದು, ರಕ್ತದೊತ್ತಡ, ಮಧುಮೇಹ, ಸಂಧಿವಾತ, ಅಸ್ತಮಾ ಮತ್ತು ಬೊಜ್ಜು ಮುಂತಾದ ಕಾಯಿಲೆಗಳಿಗೆ ಪತಂಜಲಿ ಆಯುರ್ವೇದ್ ಉತ್ಪಾದಿಸುವ ಔಷಧಿಗಳ ಜಾಹೀರಾತುಗಳನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ. ಅಲ್ಲದೆ ಈ ವಿಚಾರವಾಗಿ ಪತಂಜಲಿ ಆಯುರ್ವೇದ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

Comments (0)
Add Comment