ಸೂರ್ಯನಿಂದ ಪ್ರಬಲವಾದ ಸೌರ ಜ್ವಾಲೆ ಸ್ಪೋಟ

ನಾಸಾ: ಹೊಸ ವರ್ಷದ ಮುನ್ನಾ ದಿನವಾದ ಡಿಸೆಂಬರ್ 31 ರಂದು, ಸೂರ್ಯನು ಶಕ್ತಿಯುತವಾದ ಸೌರ ಜ್ವಾಲೆಯನ್ನು ಸ್ಫೋಟಿಸಿದೆ.

NASA ದ ಸೌರ ಡೈನಾಮಿಕ್ಸ್ ಅಬ್ಸರ್ವೇಟರಿ (SDO) ಸೂರ್ಯನ ವಾತಾವರಣದಲ್ಲಿ ಕಾಂತೀಯ ಶಕ್ತಿ ಹಠಾತ್ ಬಿಡುಗಡೆಯಾದಾಗ ಸೌರ ಜ್ವಾಲೆಯನ್ನು ಸೆರೆ ಹಿಡಿದಿದ್ದು ಈ ಚಿತ್ರವನ್ನು ನಾಸಾ ತನ್ನ ಬ್ಲಾಗ್ ಪುಟದಲ್ಲಿ ಬಿಡುಗಡೆ ಮಾಡಿದೆ. ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿ ( SDO ) 2010 ರಿಂದ ಸೂರ್ಯನನ್ನು ಗಮನಿಸುತ್ತಿರುವ NASA ಮಿಷನ್ ಆಗಿದೆ

ತೀವ್ರವಾದ ನೇರಳಾತೀತ ಬೆಳಕಿನಲ್ಲಿ ಶಕ್ತಿಯ ತೀವ್ರ ಸ್ಫೋಟವನ್ನು ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಈ ಸೌರ ಜ್ವಾಲೆ ವರ್ಗೀಕರಣದಲ್ಲಿ X5 ಆಗಿದ್ದು ಅತ್ಯಂತ ಪ್ರಬಲ ತೀವ್ರವಾದ ಪ್ರಕಾರಗಳಲ್ಲಿ ಒಂದಾಗಿದೆ.

ಸೂರ್ಯನ ಪ್ರಬಲ ಜ್ವಾಲೆಗಳ ಪರಿಣಾಮಗಳು ರೇಡಿಯೊ ಸಂವಹನಗಳ ಮೇಲೆ , ವಿದ್ಯುತ್ ಶಕ್ತಿ ಗ್ರಿಡ್‌ಗಳ ಮೇಲೆ , ನ್ಯಾವಿಗೇಷನ್ ಸಿಗ್ನಲ್‌ಗಳಲ್ಲಿ ಅಡೆತಡೆ ಉಂಟುಮಾಡುತ್ತದೆ . ಮಾತ್ರವಲ್ಲದೆ ಬಾಹ್ಯಾಕಾಶ ತಾಂತ್ರಿಕ ವ್ಯವಸ್ಥೆ ಮೇಲೆ ಮತ್ತು ಗಗನಯಾತ್ರಿಗಳಿಗೆ ಸಂಭಾವ್ಯ ಅಪಾಯಗಳನ್ನು ಉಂಟುಮಾಡಬಹುದುದಾಗಿದೆ.

ಸೌರ ಜ್ವಾಲೆಗಳೆಂದರೆ ಸೂರ್ಯನ ಮೇಲಿನ ಬೃಹತ್ ಸ್ಫೋಟಗಳಾಗಿದ್ದು, ಇಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳ ರೂಪದಲ್ಲಿ ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆಗೊಳಿಸುತ್ತವೆ. ಅವುಗಳನ್ನು ಅವು ಹೊಂದಿರುವ ತೀವ್ರತೆಯ ಆಧಾರದಲ್ಲಿ ಅತ್ಯಂತ ಪ್ರಬಲದಿಂದ ದುರ್ಬಲದ ಕ್ರಮದಲ್ಲಿ ವರ್ಗೀಕರಿಸಲಾಗಿದೆ: ಎಕ್ಸ್ – ಕ್ಲಾಸ್, ಎಂ – ಕ್ಲಾಸ್, ಸಿ – ಕ್ಲಾಸ್, ಬಿ – ಕ್ಲಾಸ್ ಮತ್ತು ಎ – ಕ್ಲಾಸ್.

ಸೂರ್ಯನ ವಾತಾವರಣದಲ್ಲಿ ಕಾಂತೀಯ ಶಕ್ತಿ ಸಂಗ್ರಹವಾಗಿ, ಅದು ಇದ್ದಕ್ಕಿದ್ದಂತೆ ಬಿಡುಗಡೆ ಹೊಂದಿದಾಗ ಸೌರ ಜ್ವಾಲೆಗಳು ಉಂಟಾಗುತ್ತವೆ

Comments (0)
Add Comment