ಸೌದಿ ಅರೇಬಿಯಾ ಮಸೀದಿಗಳಲ್ಲಿ ಇಫ್ತಾರ್ ಪಾರ್ಟಿ ನಿಷೇಧ – ಸೌದಿ ರಾಜಕುಮಾರ ಸಲ್ಮಾನ್ ಆದೇಶ

ಕಟ್ಟುನಿಟ್ಟಿನ ಆದೇಶದ ಮೂಲಕ ವಿಶ್ವದ ಗಮನ ಸೆಳೆಯುವ ಸೌದಿ ಅರೇಬಿಯಾ ಈಗ ಜನರ ಸಂಕಷ್ಟ ಅರಿತು ಅವರಿಗೆ ಧರ್ಮದ ಸಂಕೋಲೆಯಿಂದ ಹೊರ ಬರಲು ಜನಸ್ನೇಹಿ ನಿಯಮಗಳನ್ನು ಮಾಡುತ್ತಿದೆ.

ಹೌದು, ಸೌದಿಯ ಜನಸ್ನೇಹಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಸೌದಿ ಅರೇಬಿಯಾ ಮಸೀದಿಗಳಲ್ಲಿ ಇಫ್ತಾರ್ ಪಾರ್ಟಿಗಳನ್ನು ನಿಷೇಧಿಸಿ ಸೌದಿ ಆದೇಶ ಹೊರಡಿಸಿದ್ದಾರೆ. ಇದರ ಹೊರತಾಗಿ, ಇಮಾಮ್‌ಗಳು ಮತ್ತು ಮೌಲ್ವಿಗಳು ಇಫ್ತಾರ್ ಆಯೋಜಿಸಲು ದೇಣಿಗೆ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೇ, ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ಮಸೀದಿ ಉದ್ಯೋಗಿಗಳಿಗೆ ರಂಜಾನ್ ತಿಂಗಳಲ್ಲಿ ಅನುಸರಿಸಲು ಸೂಚನೆಗಳನ್ನು ನೀಡಿದೆ.

ಇದಲ್ಲದೇ, ಹೆಣ್ಣುಮಕ್ಕಳಿಗೆ ಸಂಬಂಧಿಸಿದಂತೆ ಅವರ ಇಷ್ಟವಾದ ಬಟ್ಟೆಗಳನ್ನು ಧರಿಸಲು ಅವರಿಗೆ ಅವಕಾಶ ನೀಡಲಾಗುವುದು. ತಮ್ಮಿಷ್ಟದಂತೆ ಸೌದಿ ಅರೇಬಿಯಾದ ಮುಸ್ಲಿಂ ಹೆಣ್ಣುಮಕ್ಕಳು ಬಟ್ಟೆಗಳನ್ನು ಧರಿಸಬಹುದು ಎಂದು ಸೌದಿ ರಾಜಕುಮಾರ ಸಲ್ಮಾನ್ ಹೇಳಿದ್ದರು.

Comments (0)
Add Comment