ಸೌದಿ ಜೈಲಿನಲ್ಲಿ 18 ವರ್ಷದಿಂದ ಇರುವ ವ್ಯಕ್ತಿ; ಬಿಡುಗಡೆಗೆ ಸಂಗ್ರಹವಾಯ್ತು 34 ಕೋಟಿ ರೂ.

ಕೋಝಿಕ್ಕೋಡ್ : ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಕೋಝಿಕ್ಕೋಡ್ ನ ಕೋಡಂಪುಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ 34 ಕೋಟಿ ರೂ. ನಿಧಿ ಸಂಗ್ರಹವಾಗಿದೆ.

ರಿಯಾದ್‌ನಲ್ಲಿ ಬಂಧಿಯಾಗಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಕೇರಳ ರಾಕ್ಯಾದಂತ ಹಾಗೂ ರಾಜ್ಯದ ಹೊರಗೂ ಅಪಾರ ನಿಧಿ ಸಂಗ್ರಹವಾಯಿತು. ಪ್ರಪಂಚದ ಹಲವು ಭಾಗಗಳಿಂದ ಬಂದಿರುವ ಮಲಯಾಳಿಗಳು ಅಬ್ದುಲ್ ರಹೀಮ್ ಅವರ ಬಿಡುಗಾಡೆಗಾಗಿ ಹಣ ನೀಡಿದ್ದಾರೆ. ಇನ್ನು ಇವರೆಲ್ಲರ ಮೂಲಕ ಸಂಗ್ರಹವಾಗಿರುವ ಹಣವನ್ನು 18 ವರ್ಷಗಳಿಂದ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಬಿಡುಗಡೆಗೆ ಭಾರತೀಯ ರಾಯಭಾರಿ ಕಚೇರಿ ಮೂಲಕ ಸೌದಿ ಕುಟುಂಬಕ್ಕೆ ನೀಡಲಾಗುವುದು.

ಅಬ್ದುಲ್ ರಹೀಮ್ ಬಿಡುಗಡೆಗಾಗಿ ಆರಂಭಿಸಲಾದ ಟ್ರಸ್ಟ್ ಮೂಲಕ ಪ್ರಮುಖ ನಿಧಿ ಸಂಗ್ರಹವಾಗಿತ್ತು. ಇದೀಗ 31,93,46,568 ರೂ. ಹಣ ಬ್ಯಾಂಕ್ ತಲುಪಿದೆ. ಮನೆಗೆ ನೇರವಾಗಿ 2.52 ಕೋಟಿ ರೂ. ಇದರ ಪ್ರಕಾರ 34,45,46,568 ರೂ. ಬಾಬಿ ಚೆಮ್ಮನ್ನೂರ್ ನೀಡಿದ ಒಂದು ಕೋಟಿ ರೂಪಾಯಿ ಕೊಡುಗೆಯಿಂದ ಈ ಮೊತ್ತ ತಲುಪಿದೆ ಎಂದು ಹಣಕಾಸು ಸಮಿತಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2006 ರಲ್ಲಿ, ಆಗ 26 ವರ್ಷದ ಅಬ್ದುಲ್ ರಹೀಮ್ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿದ್ದರು. ಚಾಲಕ ವೀಸಾದ ಮೇಲೆ ಸೌದಿ ಅರೇಬಿಯಾಕ್ಕೆ ಬಂದಿದ್ದ ರಹೀಮ್ ತನ್ನ ಪ್ರಾಯೋಜಕನ ಮಗ ವಿಕಲಚೇತನ ಫೈಜ್ ಅವರ ಕುತ್ತಿಗೆಗೆ ಜೋಡಿಸಲಾದ ವಿಶೇಷ ಸಾಧನದ ಮೂಲಕ ಆಹಾರ ಮತ್ತು ನೀರನ್ನು ನೀಡಲಾಗುತ್ತಿತ್ತು. ಮಗುವನ್ನು ಹೊರಗೆ ಕರೆದುಕೊಂಡು ಹೋಗುವ ಜವಾಬ್ದಾರಿಯೂ ರಹೀಮ್ ಅವರ ಮೇಲಿತ್ತು. 2006ರ ಡಿ. 24 ರಂದು ಕಾರಿನಲ್ಲಿ ಫೈಜ್ ಅವರನ್ನು ಕರೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಮಗುವಿನ ಕುತ್ತಿಗೆಗೆ ಅಳವಡಿಸಿದ್ದ ಸಾಧನಕ್ಕೆ ಅಬ್ದುಲ್ ರಹೀಮ್ ಕೈ ಸಿಕ್ಕಿಹಾಕಿಕೊಂಡಿತ್ತು. ಫೈಜ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಸಾವನ್ನಪ್ಪಿದ್ದಾರೆ.

ಈ ಘಟನೆಯ ಸಂಬಂಧ ಪೊಲೀಸರು ರಹೀಮ್ ನನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ಹಾಗೂ ರಿಯಾದ್‌ನ ನ್ಯಾಯಾಲಯವು ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಮೇಲ್ಮನವಿ ನ್ಯಾಯಾಲಯಗಳೂ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದವು. ಈ ವೇಳೆ ಫೈಜ್ ಅವರ ಕುಟುಂಬವನ್ನು ಸಂಪರ್ಕಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು, ಆದರೆ ಅವರು ಕ್ಷಮೆ ನೀಡಲು ಸಿದ್ಧರಿರಲಿಲ್ಲ. ಕೊನೆಗೂ ಸಾಕಷ್ಟು ಭರವಸೆ ನೀಡಿ ಫೈಜ್ ಕುಟುಂಬ 34 ಕೋಟಿ ರೂಪಾಯಿ ದೇಣಿಗೆಗೆ ಒಪ್ಪಿಗೆ ನೀಡಿದೆ.

Comments (0)
Add Comment