ಸ್ಕ್ರಬ್ ಟೈಫಸ್ ಕಾಟ – ಸೋಂಕಿನ ಎಚ್ಚರಿಕೆ ನೀಡಿದ ಒಡಿಶಾ ಸರಕಾರ

ದೇಶದ ದಕ್ಷಿಣ ರಾಜ್ಯವಾದ ಕೇರಳದಲ್ಲಿ ನಿಫಾ ವೈರಸ್ ಕಾಟವಾದರೆ ಅತ್ತ ಉತ್ತರದ ರಾಜ್ಯ ಒಡಿಶಾದಲ್ಲಿ ಉಣುಗು ಮತ್ತು ಪ್ರಾಣಿಗಳಿಂದ ಹರಡುವ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಡಿಶಾ ಸರಕಾರ ರಾಜ್ಯದಲ್ಲಿ ಸ್ಕ್ರಬ್ ಟೈಫಸ್ (Scrub Typhus) ಮತ್ತು ಲೆಪ್ಟೊಸ್ಪಿರೋಸಿಸ್ (Leptospirosis) ಅಂದರೆ ಪ್ರಾಣಿಗಳ ಮಲ, ಮೂತ್ರಗಳಿಂದ ಹರಡುವ ಕಾಯಿಲೆ ತಡೆಯಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ವರದಿಯಲ್ಲೇನಿದೆ?

ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಬರ್ಗರ್ ಜಿಲ್ಲೆಯಲ್ಲಿ ಈ ಕಾರಣದಿಂದ 5 ಮಂದಿ ಮೃತಪಟ್ಟಿದ್ದಾರೆ. ಸ್ಕ್ರಬ್ ಟೈಫಸ್ ಸೋಂಕು ರಾಜಸ್ತಾನ ಮತ್ತು ಹಿಮಾಚಲ ಪ್ರದೇಶದಲ್ಲಿಯೂ ಕಂಡುಬಂದಿದ್ದು, ಶಿಮ್ಲಾದಲ್ಲಿ ಈಗಾಗಲೇ 9 ಮಂದಿ ಇದೇ ಕಾರಣದಿಂದ ಮೃತಪಟ್ಟಿದ್ದಾರೆ.

ಶೀತ, ತಲೆನೋವು, ಸ್ನಾಯು ನೋವು, ಜ್ವರ, ಮಾನಸಿಕ ಅಸ್ವಸ್ಥತೆ, ರಕ್ತಸ್ರಾವ, ಅಂಗಾಂಗ ವೈಫಲ್ಯ ರೋಗ ಲಕ್ಷಣಗಳು. ಆರಂಭದಲ್ಲೇ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಸ್ಕ್ರಬ್ ಟೈಫಸ್ ತಡೆಗಟ್ಟಲು ಯಾವುದೇ ಲಸಿಕೆ ಕಂಡು ಹಿಡಿದಿಲ್ಲ. ಸೋಂಕಿತ ಕಿಟಗಳಿಂದ ದೂರುವಿರುವ ಮೂಲಕ ಅಪಾಯದಿಂದ ದೂರವಾಗಬಹುದು. ಅದರಲ್ಲೂ ಪರಾವಲಂಬಿ ಕೀಟ ಉಣುಗು ಸೋಂಕನ್ನು ಹರಡುವುದರಿಂದ ಅದರ ಕಡಿತದಿಂದ ದೂರವಿರಬೇಕು. ಉಣುಗು ಜಾನುವಾರು, ಕುರಿ, ನಾಯಿ, ಆಡು ಮುಂತಾದ ಪ್ರಾಣಿಗಳ ರಕ್ತ ಹೀರಿ ಬದುಕುತ್ತದೆ.

Comments (0)
Add Comment