ಹನುಮ ಧ್ವಜ ತೆರವು ವಿವಾದ: ಹನುಮ ಧ್ವಜ ಹಾರಿಸಬೇಕೆಂದು ಒತ್ತಾಯಿಸಿ ಇಂದು ಮಂಡ್ಯನಗರ ಬಂದ್

ಮಂಡ್ಯ: ಹಿಂದೂಪರ ಸಂಘಟನೆಗಳಿಂದ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಿಸಬೇಕೆಂದು ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ಮಂಡ್ಯ ನಗರ ಬಂದ್ ಗೆ ಕರೆ ನೀಡಲಾಗಿದೆ.

ಶ್ರೀರಾಮ ಭಜನಾ ಮಂಡಳಿಯವರು ಇಂದು ಬೆಳಗ್ಗೆ 9ಕ್ಕೆ ಕೆರಗೋಡು ಗ್ರಾಮದ ಹನುಮಧ್ವಜ ಇಳಿಸಿದ ಸ್ಥಳದಿಂದ ಬೈಕ್ ರ್ಯಾಲಿ ಮೂಲಕ ಮಂಡ್ಯದ ರೈಲ್ವೆ ನಿಲ್ದಾಣದ ಬಳಿಯ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.

ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಿದ್ದಾರೆ. ಸ್ವಯಂ ಪ್ರೇರಿತ ಬಂದ್ಗೆ ಸಹಕರಿಸುವಂತೆ ವರ್ತಕರು ಮತ್ತು ಅಂಗಡಿ ಮಾಲೀಕರಿಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಫೆ. 8 ಗುಲಾಬಿ ಹೂ ನೀಡಿ ಮನವಿ ಮಾಡಿದರು.

ಫೆ.7ರಂದು ಪ್ರಗತಿಪರ ಸಂಘಟನೆಗಳು ಮತ್ತು ಸಮಾನ ಮನಸ್ಕರ ವೇದಿಕೆ ಮುಖಂಡರು ಬಂದ್ಗೆ ಕರೆ ನೀಡಿದ್ದು ಜಿಲ್ಲಾಡಳಿತ ಮನವೊಲಿಸಿ ವಾಪಸ್ ಪಡೆಯಲು ಯಶಸ್ವಿಯಾಗಿತ್ತು ಆದರೆ ಹಿಂದೂಪರ ಸಂಘಟನೆಗಳು ಕರೆ ನೀಡಿರುವ ಬಂದ್ ವಾಪಸ್ ಪಡೆಯುವಂತೆ ಮನವೊಲಿಸಲು ಸಫಲರಾದರೂ, ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡುವ ಮೂಲಕ ಪ್ರತಿಭಟನೆಗೆ ಮುಂದಾಗಿವೆ.

Comments (0)
Add Comment