ಹಮಾಸ್ ಉಗ್ರರ ವಿರುದ್ಧದ ಯುದ್ಧದಲ್ಲಿ ಸೈನಿಕರೊಂದಿಗೆ ಯುದ್ಧಭೂಮಿಗೆ ಇಳಿದ ಇಸ್ರೇಲ್ ಮಾಜಿ ಪ್ರಧಾನಿ

ಹಮಾಸ್‌ನೊಂದಿಗಿನ ಇಸ್ರೇಲ್ ಯುದ್ಧವು ಉಲ್ಬಣಗೊಂಡಿದೆ. ಎರಡೂ ಕಡೆ ದಾಳಿಯಿಂದ 1200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇನ್ನು, ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಯುದ್ಧಭೂಮಿಯಲ್ಲಿ ಸೈನಿಕರನ್ನು ಸೇರಿಕೊಂಡು, ಹಮಾಸ್ ಉಗ್ರರ ವಿರುದ್ಧ ಯುದ್ಧ ಸಾರಿದ್ದಾರೆ. ಹಮಾಸ್‌ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಹಮಾಸ್‌ ಮೇಲೆ ಯುದ್ಧವನ್ನೇ ಸಾರಿದೆ. ಇಸ್ರೇಲ್‌ ಸೈನಿಕರು ಯುದ್ಧಭೂಮಿಗೆ ಇಳಿದಿದ್ದು, ಉಗ್ರರನ್ನು ಹಾಗೂ ಅವರ ಅಡಗುತಾಣಗಳನ್ನು ನಾಶ ಮಾಡ್ತಿದೆ. ಸೈನಿಕರ ಜತೆ ಇಸ್ರೇಲ್‌ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಸೇರಿಕೊಂಡಿದ್ದು, ಯುದ್ಧದಲ್ಲಿ ಹೋರಾಡೋದಾಗಿ ಪಣ ತೊಟ್ಟಿದ್ದಾರೆ. ಶನಿವಾರ ಪ್ಯಾಲೆಸ್ತೀನ್ ಗುಂಪು ನಡೆಸಿದ ಹಠಾತ್ ದಾಳಿಯ ನಂತರ ಇಸ್ರೇಲ್ ಹಮಾಸ್ ವಿರುದ್ಧ ಬೃಹತ್ ಪ್ರತಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ದಕ್ಷಿಣದ ಪಟ್ಟಣಗಳಲ್ಲಿ ನೆಲೆಗೊಂಡಿರೋ ಹಮಾಸ್‌ನೊಂದಿಗೆ ಇಸ್ರೇಲ್‌ ಹೋರಾಡುತ್ತಿದ್ದು, ಪ್ಯಾಲೆಸ್ತೀನ್‌ ಗುಂಪನ್ನು ಸೋಲಿಸಲು ಪ್ರತಿಜ್ಞೆ ಮಾಡಿದೆ. ಅಲ್ಲದೆ, ಗಾಜಾ ಪಟ್ಟಿಯ ಬಳಿ ಹತ್ತು ಸಾವಿರ ಸೈನಿಕರನ್ನು ಒಟ್ಟುಗೂಡಿಸಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಎಲ್ಲಾ ಹಮಾಸ್ ತಾಣಗಳಿಂದ ದೂರ ಹೋಗುವಂತೆ ಗಾಜಾ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅದನ್ನು “ಅವಶೇಷಗಳಾಗಿ” ಪರಿವರ್ತಿಸಲಾಗುವುದು ಎಂದು ಅವರು ಹೇಳಿದ್ದಾರೆ. 1973 ರ ಬಳಿಕ ಅಂದರೆ 5 ದಶಕಗಳ ಬಳಿಕ ಮೊದಲ ಬಾರಿಗೆ ಭಾರಿ ಪ್ರಮಾಣದ ಬೃಹತ್ ಕಾರ್ಯಾಚರಣೆ ಇದಾಗಿದೆ. ಹಮಾಸ್‌ ಸಾವಿರಾರು ರಾಕೆಟ್‌ಗಳಿಂದ ದಾಳಿ ಮಾಡಿದ್ದು, ಬಳಿಕ ಆಕ್ರಮಣ ನಡೆಸಿದ್ದು, ಯುದ್ಧಕ್ಕೆ ಕಾರಣವಾಗಿದೆ.

Comments (0)
Add Comment