‘ಹಮಾಸ್ ಬಂಡುಕೋರರು ಅಲ್‌ ಕೈದಾಗಿಂತ ದುಷ್ಟರು’ – ಜೋ ಬೈಡನ್‌

ವಾಷಿಂಗ್ಟನ್: ಇಸ್ರೇಲ್ ಮೇಲೆ ದಾಳಿ ಮಾಡಿ ಸಾವಿರಾರು ಅಮಾಯಕ ಜನರನ್ನು ಹೀನಾಯವಾಗಿ ಕೊಂದ ಹಮಾಸ್ ಬಂಡುಕೋರರನ್ನು ಅಲ್‌ ಕೈದಾಗಿಂತ ಕ್ರೂರಿಗಳು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಹಮಾಸ್‌ ಬಂಡುಕೋರರು ಶುದ್ಧ ದುಷ್ಟರು.ಇಸ್ರೇ ಲ್ ಬೆಂಬಲಿಸುವ ಮೂಲಕ ಅಮೆರಿಕ ಯಾವುದೇ ತಪ್ಪು ಮಾಡಿಲ್ಲ. ಅಮೆರಿಕ ಇಸ್ರೇಲ್ ಜತೆ ನಿಲ್ಲಲಿದೆ ಎಂದು ಬೆಂಬಲಿಸಲಿದೆ.

ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಅವರು ಇಂದು ಇಸ್ರೇಲ್‌ನಲ್ಲಿದ್ದಾರೆ ಎಂದು ಬೈಡನ್ ಹೇಳಿದ್ದಾರೆ. ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹಾಗೂ ಉಗ್ರರಿಗೆ ಪ್ರತ್ಯುತ್ತರ ನೀಡಲು ಇಸ್ರೇಲ್‌ಗೆ ಅಗತ್ಯವಿರುವುದನ್ನು ನಾವು ಖಚಿತಪಡಿಸುತ್ತೇವೆ. ಅಲ್ಲದೆ ಗಾಜಾದಲ್ಲಿ ಮಾನವೀಯ ಬಿಕ್ಕಟ್ಟನ್ನು ತುರ್ತಾ ಗಿ ಪರಿಹರಿಸುವುದೂ ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.

ಇಸ್ರೇಲ್‌ಗೆ ಸಹಾಯ ಮಾಡಲು ನನ್ನ ನಿರ್ದೇಶನದಂತೆ, ನನ್ನ ತಂಡ ಆ ಪ್ರದೇಶದಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇಸ್ರೇ ಲ್, ಈಜಿಪ್ಟ್, ಜೋರ್ಡನ್ ಹಾಗೂ
ಇತರ ಅರಬ್ ದೇಶಗಳ ಸರ್ಕಾರ ಮತ್ತು ವಿಶ್ವಸಂಸ್ಥೆಯೊಂ ದಿಗೆ ಸಂಪರ್ಕದಲ್ಲಿದೆ ಎಂದು ಬೈ ಡನ್ ತಿಳಿಸಿದ್ದಾರೆ.

ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿಕೊಂಡಿರುವ ಅಮೆರಿಕ ಪ್ರಜೆಗಳ ಬಿಡುಗಡೆಗೆ ನಾವು ಆಹೋ ರಾತ್ರಿ ಶ್ರಮಿಸುತ್ತಿದೆ. ಇಸ್ರೇ ಲ್
ಹಾಗೂ ಆ ಪ್ರದೇಶದಲ್ಲಿರುವ ನಮ್ಮ ಪಾಲುದಾರರ ಸಹಾಯದೊಂದಿಗೆ ಅವರನ್ನು ನಾವು ಮರಳಿ ಕರೆ ತರುವವರೆಗೂ ನಾವು ವಿಶ್ರಮಿಸಲ್ಲ ಎಂದು
ಅಮೇರಿಕಾ ಪಣತೊಟ್ಟಿದೆ.

Comments (0)
Add Comment