ಹಾಸನ: ಶಾಲೆಯಲ್ಲಿ ಮಕ್ಕಳಿಂದ ನಮಾಜ್, ಖುರಾನ್ ಪಠಣ: ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಹಾಸನ: ಚನ್ನರಾಯಪಟ್ಟಣದ ನಾಗೇಶ್ ಎಜುಕೇಶನ್ ಟ್ರಸ್ಟ್‌ನ ಜ್ಞಾನಸಾಗರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಬಕ್ರೀದ್ ಹಿನ್ನೆಲೆಯಲ್ಲಿ ಮಕ್ಕಳಿಂದ ಖುರಾನ್ ಪಠಿಸಲಾಗಿದೆ. ಶಾಲೆಯ ನೂರಾರು ಮಕ್ಕಳನ್ನು ಒಂದೆಡೆ ಸೇರಿಸಿ ಖುರಾನ್‌ನ ಶ್ಲೋಕವನ್ನು ಉರ್ದು ಭಾಷೆಯಲ್ಲಿ ಪಠಣ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಶುಕ್ರವಾರ (ಜೂನ್ 30) ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಸದ್ಯ ಈಗ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಲಾ ಆಡಳಿತ ಮಂಡಳಿ, ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ. ಕೇವಲ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಆಚರಣೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಖ್ಯಾತ ಲೇಖಕ ಫ್ರೊ.ಪಟ್ಟಾಭಿರಾಮ ಸೋಮಯಾಜಿ ನಿಧನ

ಶಾಲೆಯ ಸಭಾಂಗಣದಲ್ಲಿ ನಡೆದಿದ್ದ ಬಕ್ರೀದ್ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಮಾಜ್ ರೀತಿಯ ಖುರಾನ್ ಪಠಣೆ ಮಾಡಲಾಗಿದ್ದು ಉಳಿದ ಮಕ್ಕಳು ಕಣ್ಣು ಮುಚ್ಚಿ ಕೈ ಮುಗಿದು ಕುಳಿತಿದ್ದಾರೆ. ಬಕ್ರೀದ್ ಏಕೆ ಆಚರಿಸಲಾಗುತ್ತೆ ಎಂಬ ಬಗ್ಗೆ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡಿದೆ. ಕೆಲ ಪೋಷಕರೂ ಕೂಡ ಈ ಆಚರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಜಾತ್ಯತೀತ ತತ್ವ ಪಾಲನೆ ಮಾಡಲಾಗುತ್ತದೆ. ಬಕ್ರೀದ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಬ್ಬದ ಬಗ್ಗೆ ಅರಿವು ಮೂಡಿಸಲಾಗಿದೆ. ಬೇರೆ ಯಾವ ಮಕ್ಕಳಿಂದಲೂ ಪ್ರಾರ್ಥನೆ ಮಾಡಿಸಲಾಗಿಲ್ಲ. ಕೇವಲ ಮುಸ್ಲಿಂ ಮಕ್ಕಳು ಮಾತ್ರ ಪ್ರಾರ್ಥನೆ ಮಾಡಿದ್ದು ಉಳಿದವರು ಮೌನವಾಗಿದ್ದರು ಅಷ್ಟೆ. ಆದರೂ ಇಂತಹ ಆಚರಣೆಯಿಂದ ಸಮಸ್ಯೆ ಆಗುವುದಾದರೆ ಮುಂದೆ ಇಂತಹ ಆಚರಣೆ ಮಾಡುವುದಿಲ್ಲ ಎಂದು ಶಾಲೆಯ ಪ್ರಾಂಶುಪಾಲರಾದ ಸುಜಾ ಫಿಲಿಪ್ ಸ್ಪಷ್ಟನೆ ನೀಡಿದ್ದಾರೆ.

Comments (0)
Add Comment