ಹುಕ್ಕಾ ಬ್ಯಾನ್ ಆದ ಬೆನ್ನಲ್ಲೇ ಹುಕ್ಕಾ ಶಾಪ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು

ಬೆಂಗಳೂರು : ಹುಕ್ಕಾ ಸೇವನೆ, ಮಾರಾಟ ನಿಷೇಧವಾದ ಬೆನ್ನಲ್ಲೇ ಅಲರ್ಟ್ ಆಗಿರುವ ಸಿಸಿಬಿ ಪೊಲೀಸರು, ನಗರದ ಮೂರು ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ ಕೋಟ್ಯಾಂತರ ರೂಪಾಯಿ ಮೌಲ್ಯದ ಹುಕ್ಕಾ ಪದಾರ್ಥಗಳನ್ನ ಜಪ್ತಿ ಮಾಡಿದ್ದಾರೆ. ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಚಾಮರಾಜಪೇಟೆ, ಮಹದೇವಪುರ ಸೇರಿದಂತೆ ಮೂರು ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಪೊಲೀಸರು, ಬ್ಯಾನ್ ಆದ ಬಳಿಕವೂ ಹುಕ್ಕಾ ಬಾರ್ ಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ತಂಬಾಕು ಹಾಗೂ ನಿಕೋಟಿಕ್ ವಸ್ತುಗಳನ್ನ ಸಾಗಿಸ್ತಿದ್ದ ಸ್ಟೋರ್ ಗಳಲ್ಲಿ ಹುಕ್ಕಾ ಬಾರ್ ಗೆ ಸಂಬಂಧಿಸಿದ ಕಿಟ್ ಗಳು, ಮಾದಕ ವಸ್ತು, ಫ್ಲೆವರ್ಸ್ ವಶಕ್ಕೆ ಪಡೆಯಲಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಎಲ್ಲಾ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ, ಸ್ವಾಧೀನ ಮತ್ತು ಅವುಗಳ ಜಾಹೀರಾತಿಗೆ ಬುಧವಾರದಿಂದಲೇ ಜಾರಿಗೆ ಬರುವಂತೆ ನಿಷೇಧ ವಿಧಿಸಿ ಆರೋಗ್ಯ ಇಲಾಖೆಯ ಆದೇಶ ಹೊರಡಿಸಿತ್ತು.

Comments (0)
Add Comment