‘ಹೈಕಮಾಂಡ್ ಒಂದು ಬಾರಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ ಎಲ್ಲರೂ ಒಪ್ಪಬೇಕು’ – ಸಚಿವ ಶ್ರೀರಾಮುಲು

ಬೆಂಗಳೂರು : ವಿರೋಧ ಪಕ್ಷದ ನಾಯಕನ ಆಯ್ಕೆಯ ವಿಚಾರವಾಗಿ ಪಕ್ಷದ ನಡುವೆ ಭಿನ್ನಭಿಪ್ರಾಯ ಮೂಡಿದ್ದು, ಈ ಕುರಿತಾಗಿ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ಒಂದು ಬಾರಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ ಅದಕ್ಕೆ ಎಲ್ಲರೂ ಒಪ್ಪಬೇಕು ಎಂದು ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನ ದೊರೆಯದ ಹಿನ್ನೆಲೆ ಯತ್ನಾಳ್ ಬಹಿರಂಗ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಒಂದು ಬಾರಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಮುಗೀತು. ಯಾರೇ ಈ ಸ್ಥಾನದಲ್ಲಿದ್ದರೂ ಎಲ್ಲರೂ ಅವರನ್ನು ಗೌರಸಬೇಕು ಎಂದರು.

ಇನ್ನು ಬಿಜೆಪಿ ಪಕ್ಷದಿಂದ ವಿಪಕ್ಷದ ನಾಯಕನಾಗಿ ಆರ್ .ಅಶೋಕ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ರಾಜ್ಯಾಧ್ಯಕ್ಷರಾಗಿ ನೇಮಕರಾದ ವಿಜಯೇಂದ್ರ ಕಿರಿಯರು ಒಪ್ತೀನಿ. ಅವರಿಗೆ ಹೈಕಮಾಂಡ್ ಒಂದು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಎಲ್ಲರು ಅವರಿಗೆ ಸಪೋರ್ಟ್ ಮಾಡಿದ್ರೆ ಪಕ್ಷ ಮುನ್ನಡೆಸಲು ಅನುಕೂಲ ಆಗುತ್ತೆ. ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ. ಏನೇ ಸಮಸ್ಯೆ ಇದ್ದರೂ ನಮ್ಮ ನಡುವೆಯೇ ಸರಿ ಮಾಡಿಕೊಂಡು ಕೆಲಸ ಮಾಡೋಣ ಎಂದರು.

Comments (0)
Add Comment