ಹೊಸ ವರ್ಷದಲ್ಲಿ ಹೊಸ ದಾಖಲೆ ಬರೆಯುತ್ತಾ ಚಿನ್ನ? ಹಳದಿ ಲೋಹದ ಬೆಲೆ ಏರಿಕೆ

ನವದೆಹಲಿ: ಹೊಸ ವರ್ಷದಲ್ಲಿ ಚಿನ್ನದ ಬೆಲೆ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ವೇಗವಾಗಿ ಸಾಗುತ್ತಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡು ಡಿ.28 ಮತ್ತಷ್ಟು ಹೆಚ್ಚಾಗಿದೆ. ಇದು ಚಿನ್ನಾಭರಣ ಪ್ರಿಯರಿಗೆ ಬೇಸರ ತರಿಸಿದ್ದು, ಖರೀದಿಸುವವರ ಜೇಬಿಗೆ ಹೆಚ್ಚಿನ ಹೊರೆಯಾಗಿದೆ.

ಗುರುವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 400 ರೂ. ಏರಿಕೆಗೊಂಡಿದ್ದು 59,050 ರೂ.ಗೆ ತಲುಪಿದೆ. ಶುದ್ಧ ಚಿನ್ನದ ಬೆಲೆ 10 ಗ್ರಾಂ 440 ರೂ. ಹೆಚ್ಚಾಗಿದ್ದು, 64,400 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 300 ರೂ. ಹೆಚ್ಚಿದ್ದು, 79,500 ರೂ. ದಾಖಲಾಗಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 64,250 ರೂ. ಆಗಿದೆ.

Comments (0)
Add Comment