104ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ಬರೆದಿದ್ದ ಅಜ್ಜಿ ನಿಧನ

ಅಮೆರಿಕ: 104 ನೇ ಇಳಿ ವಯಸ್ಸಿನಲ್ಲಿ 13,500 ಮೀಟರ್ ಎತ್ತರದಲ್ಲಿ ಸ್ಕೈಡೈವ್ ಮಾಡಿ ಗಿನ್ನೀಸ್ ವಿಶ್ವ ದಾಖಲೆ ಬರೆದು ಗಮನ ಸೆಳೆದಿದ್ದ ಅಮೆರಿಕದ ಚಿಕಾಗೊ ಮಹಿಳೆ‌ ಡೊರೊಥಿ ಹಾಫ್‌ನರ್‌ ನಿಧನರಾಗಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ರಾಯಿಟರ್ಸ್‌ X ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಅಮೆರಿಕದ ಚಿಕಾಗೋದ ಡೊರೊಥಿ ಹಾಫ್ನರ್(104) ಚಿಕಾಗೊದಲ್ಲಿ ವಯೋಸಹಜವಾಗಿ ಮಲಗಿದ್ದಲ್ಲೇ ನಿಧನರಾಗಿದ್ದಾರೆ ಎಂದು ತಿಳಿಸಿದೆ.

ಡೊರೊಥಿ ಅವರು 13,500 ಅಡಿ ಎತ್ತರದಿಂದ ವಿಮಾನದಿಂದ ಜಿಗಿದು ಸ್ಕೈಡೈವ್ ಮಾಡಿದ್ದರು. ಈ ಮೂಲಕ ಸ್ಕೈಡೈವ್ ಮಾಡಿದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಸ್ಕೈಡೈವ್ ಚಿಕಾಗೊ ಇನ್‌ಸ್ಟಾಗ್ರಾಮ್‌ ಪುಟ ಇದರ ವಿಡಿಯೊವನ್ನು ಹಂಚಿಕೊಂಡಿತ್ತು. ‘ಇದು ವಿನೋದಮಯವಾಗಿತ್ತು ಮತ್ತು ತುಂಬಾ ಸುಂದರವಾಗಿ ಕಾಣಿಸುತ್ತಿತ್ತು’ ಎಂದು ಡೊರೊಥಿ ಹಾಫ್‌ನರ್‌ ಸ್ಕೈಡೈವ್ ಬಳಿಕ ಖುಷಿ ಹಂಚಿಕೊಂಡಿದ್ದರು

Comments (0)
Add Comment