14 ದಿನ ಇಡಿ ಕಸ್ಟಡಿಗೆ ಜೆಟ್ ಏರ್ ವೇಸ್ ಸಂಸ್ಥಾಪಕ

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇಡಿ ವಶಕ್ಕೆ ತೆಗೆದುಕೊಂಡಿದೆ. ಜೆಟ್ ಏರ್ ವೇಸ್ ನ ಕಾರ್ಯಾಚರಣೆಗೆ ಕೆನರಾ ಬ್ಯಾಂಕ್ ಮಂಜೂರು ಮಾಡಿದ ಸಾಲವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ. 2 ಬಾರಿ ನೋಟಿಸ್ ನೀಡಿದ್ರು ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ಕೋರ್ಟ್ ಗೆ ತಿಳಿಸಿದೆ. ಗೋಯಲ್ ಅವರಿಗೆ 14 ದಿನ ಕಸ್ಟಡಿಗೆ ಒಪ್ಪಿಸುವಂತೆ ಮುಂಬೈನ ಪಿಎಂಎಲ್ ಎ ನ್ಯಾಯಾಲಯಕ್ಕೆ ಕೋರಿದ್ದಾಗ ಸೆಪ್ಟೆಂಬರ್ 11 ರವರೆಗೆ ಒಪ್ಪಿಸಿ ಕೋರ್ಟ್ ಆದೇಶ ಕೊಟ್ಟಿದೆ.

Comments (0)
Add Comment