20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಇಡಿ ಅಧಿಕಾರಿ ಅರೆಸ್ಟ್‌

ಚೆನ್ನೈ: ನೌಕರರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಯನ್ನು ತಮಿಳುನಾಡಿನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ದಿಂಡಿಗಲ್ ನಲ್ಲಿ ಬಂಧಿಸಿದೆ.

ಬಂಧಿತ ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ಅಂಕಿತ್ ತಿವಾರಿ ಎಂದು ಗುರುತಿಸಲಾಗಿದೆ. ತಿವಾರಿಗೆ ಕೋರ್ಟ್‌ಡಿಸೆಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ನೌಕರರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದರು ಎನ್ನಲಾಗಿದೆ.

ತಿವಾರಿ ಬಂಧನದ ನಂತರ ದಿಂಡಿಗಲ್ ಜಿಲ್ಲಾ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಜಂಟಿಯಾಗಿ ಮದುರೈಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಶೋಧ ಕಾರ್ಯನಡೆಸಿದೆ ಎಂದು ವರದಿಯಾಗಿದೆ.

ಅಂಕಿತ್ ತಿವಾರಿ ಮನೆಯಲ್ಲಿಯೂ ಶೋಧ ಕಾರ್ಯ ನಡೆಸಲಾಗಿದೆ. ಈ ಪ್ರಕರಣದಲ್ಲಿ ಮದುರೈ ಮತ್ತು ಚೆನ್ನೈ ನ ಹಲವು ಅಧಿಕಾರಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ಹಲವಾರು ಜನರಿಗೆ ಬ್ಲ್ಯಾ ಕ್ ಮೇಲ್ ಮಾಡಿರುವ ಆರೋಪಗಳಿವೆ. ತಿವಾರಿ ಪಡೆದ ಲಂಚದ ಹಣ ಇತರ ಇ.ಡಿ. ಅಧಿಕಾರಿಗಳಿಗೂ ಹಂಚುತ್ತಿದ್ದರು ಎಂದು ವರದಿಯಾಗಿದೆ.

Comments (0)
Add Comment