2024ರ ರಷ್ಯಾ ಚುನಾವಣೆಗೆ ವ್ಲಾದಿಮಿರ್ ಪುಟಿನ್ ಸ್ಪರ್ಧೆ

ಮಾಸ್ಕೋ: ರಷ್ಯಾ ಅಧ್ಯಕ್ಷೀಯ ಚುನಾವಣೆ ಮುಂದಿನ ವರ್ಷದ ಮಾ. 17ಕ್ಕೆ ನಡೆಯಲಿದೆ. ಈ ಬಗ್ಗೆ ಅಲ್ಲಿನ ಸರಕಾರ ಸಿದ್ಧತೆಗಳನ್ನು ನಡೆಸಲು ಆರಂಭಿಸಲಾಗಿದೆ ಎಂಬ ಮಾಹಿತಿ ದೊರಕಿದೆ.

ಪುಟಿನ್ ಈಗಾಗಲೇ ಬರೋಬ್ಬರಿ 4 ಬಾರಿ ಅಧ್ಯಕ್ಷೀಯ ಚುನಾವಣೆ ಗೆದ್ದಿದ್ದಾರೆ. ಅಲ್ಲದೆ ಈ ಅಧಿಕಾರ ಅಸ್ತ್ರವನ್ನು 2030ರ ತನಕ ಮುಂದುವರಿಸಿಕೊಂಡು ಹೋಗಲು ಪುಟಿನ್ ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಪುತಿನ್‌ ಅಧಿಕೃತವಾಗಿ ಎಲ್ಲಿಯೂ ಘೋಷಣೆ ಮಾಡಿಲ್ಲ.

ರಷ್ಯಾ ಸಂವಿಧಾನಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿಯ ಪ್ರಕಾರ, ಪುತಿನ್‌ ಅವರಿಗೆ ಹಾಲಿ ಅವಧಿ ಮುಕ್ತಾಯದ ಬಳಿಕ ಇನ್ನೂ ಎರಡು ಬಾರಿ ಆರು ವರ್ಷಗಳ ಅವಧಿಗೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಡುತ್ತದೆ.

Comments (0)
Add Comment