21 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಮೇತ ಆಫ್ರಿಕಾ ಮೂಲದ ಆರೋಪಿಯ ಬಂಧನ

ಬೆಂಗಳೂರುತೆ ತಯಾರಾಗುತ್ತಿದ್ದು, ಇಂತಹ ಪಾರ್ಟಿಗಳಿಗೆ ಕೆಲವೊಮ್ಮೆ ಮಾದಕ ವಸ್ತುವಿನ ನಂಟು ಇರುತ್ತದೆ. ಈ ನಡುವೆ ನ್ಯೂ ಇಯರ್ ಪಾರ್ಟಿಯನ್ನೇ ಟಾರ್ಗ್ ಟ್ ಮಾಡಿ ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಓಕ್ವುಡಿಲಿ ಎಂದು ಗುರುತಿಸಲಾಗಿದೆ. ಈತ ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದಿದ್ದ.

ಆರೋಪಿ ಹೊಸ ವರ್ಷದ ಹಿನ್ನಲೆಯಲ್ಲಿ ಲಾಭಗಳಿಸುವ ಉದ್ದೇಶದಿಂದಲೇ ಆಫ್ರಿಕಾದಿಂದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಬೆಡ್​ಶೀಟ್​​ ಕವರ್​​, ಸೋಪ್​​ ಬಾಕ್ಸ್​​​ ಹಾಗೂ ಚಾಕೊಲೇಟ್​ ಬಾಕ್ಸ್​ನಲ್ಲಿ ಕಳ್ಳ ಸಾಗಣಿ ಮಾಡಿ ತಂದಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಒಟ್ಟು 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)
Add Comment