480 ಕೋಟಿ ರೂ ಡ್ರಗ್ಸ್ ಸಾಗಿಸುತ್ತಿದ್ದ ಪಾಕ್ ಬೋಟ್ ವಶ – 6 ಜನರ ಬಂಧನ

ಅಹಮದಾಬಾದ್‌: ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಜಂಟಿ ಕಾರ್ಯಾಚರಣೆಯಲ್ಲಿ, ಗುಜರಾತ್‌ನ ಪೋರಬಂದರ್ ಕರಾವಳಿಯ ಅರೇಬಿಯನ್ ಸಮುದ್ರದಲ್ಲಿ ಸುಮಾರು 480 ಕೋಟಿ ರೂಪಾಯಿ ಮೌಲ್ಯದ 80 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ಬಂಧಿಸಿದೆ.

ದೋಣಿಯಲ್ಲಿದ್ದ ಆರು ಮಂದಿಯನ್ನು ಸಹ ಬಂಧಿಸಲಾಗಿದೆ. ICG ಹಡಗುಗಳು ಅದನ್ನು ಸುತ್ತುವರೆಯುತ್ತಿದ್ದಂತೆ ದೋಣಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಆದಾಗ್ಯೂ, ಅದನ್ನು ಬೆನ್ನಟ್ಟಿದ ಐಸಿಜಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದೋಣಿಯನ್ನು ತಡೆದು ಡ್ರಗ್ಸ್‌ ಪತ್ತೆಹಚ್ಚಿದ್ದಾರೆ.

Comments (0)
Add Comment