58 ವರ್ಷದ ವ್ಯಕ್ತಿಗೆ ಹಂದಿ ಹೃದಯ ಜೋಡಣೆ- ವೈದ್ಯ ಲೋಕದಲ್ಲಿ ಹೊಸ ಸಾಹಸ

ನ್ಯೂಯಾರ್ಕ್:ಅಮೆರಿಕದ ಮೇರಿಲ್ಯಾಂಡ್ ವಿವಿ ತಜ್ಞರು ವೈದ್ಯ ಲೋಕದಲ್ಲಿ ಹೊಸ ಸಾಹಸಕ್ಕೆ ಕಯ ಹಾಕಿದ್ದಾರೆ. ಸಾವಿನಂಚಿನಲ್ಲಿದ್ದ 58 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನವಾಗಿ ಹಂದಿಯ ಹೃದಯವನ್ನು ಆತನಿಗೆ ಅಳವಡಿಸಿದ್ದಾರೆ.

ಲಾರೆನ್ಸ್ ಫೌಸೆಟ್ ವ್ಯಕ್ತಿಯು ಹಂದಿ ಹೃದಯದ ಕಸಿ ಪಡೆದ ವಿಶ್ವದ ಎರಡನೇ ರೋಗಿಯಾಗಿದ್ದಾರೆ. ಈ ಆಪರೇಷನ್ ನಡೆದ ಎರಡು ದಿನಗಳಿಗೇ ರೋಗಿ ಚೇತರಿಸಿಕೊಂಡಿದ್ದಾರೆ. ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತಾರೆ. ಅದರೆ ಮುಂದಿನ ದಿನಗಳು ಕಠಿಣ ಎಂದೇ ಹೇಳಬಹುದು. ಆದರೆ ಸದ್ಯದ ಸ್ಪಂದನೆ ನಮ್ಮನ್ನೇ ಅಚ್ಚರಿ ಮೂಡಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಇದು ವೈದ್ಯಕೀಯ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಆಗಿದೆ. ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವುದರಿಂದ ಮಾನವ ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಗೆ ಪರಿಹಾರವಾಗಿದೆ. 1,00,000 ಕ್ಕೂ ಹೆಚ್ಚು ಅಮೆರಿಕನ್ನರು ಪ್ರಸ್ತುತ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ರೋಗಿಯು ಹೃದಯ ಕಸಿಯಾದ 2 ತಿಂಗಳಿಗೆ ಮೃತಪಟ್ಟಿದ್ದಾನೆ.

Comments (0)
Add Comment