6 ತಿಂಗಳಲ್ಲಿ ಪೌರತ್ವ ತ್ಯಜಿಸಿದ 87,000 ಭಾರತೀಯ ಪ್ರಜೆಗಳು

ನವದೆಹಲಿ:ಕಳೆದ 6 ತಿಂಗಳಲ್ಲಿ ಸುಮಾರು 87,026 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದುವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.

ಅವರು ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿ, 2021ರಲ್ಲಿ 17.50ಲಕ್ಷಕ್ಕೂ ಹೆಚ್ಚು ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಅಲ್ಲದೇ 2022ರಲ್ಲಿ 2,25,620 ಭಾರತೀಯರು, 2021 ರಲ್ಲಿ 1,63,370, ಹಾಗೂ  2020ರಲ್ಲಿ   85,256 ಮಂದಿ ಮತ್ತು 2019 ರಲ್ಲಿ 1,44,017 ಜನ ಪೌರತ್ವ ತ್ಯಜಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಜಾಗತಿಕವಾಗಿ ಉದ್ಯೋಗ ಅನ್ವೇಷಿಸುವ ಭಾರತೀಯ ಪ್ರಜೆಗಳ ಸಂಖ್ಯೆ ಗಣನೀಯವಾಗಿದೆ. ಹಲವರು ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ಆಯ್ಕೆ ಮಾಡಿದ್ದಾರೆ. ವಿದೇಶದಲ್ಲಿರುವ ಭಾರತೀಯ ಸಮುದಾಯವ’ ರಾಷ್ಟ್ರದ ಆಸ್ತಿ’ಎಂದು ಗುರುತಿಸಿರುವುದಾಗಿ ಜೈಶಂಕರ್ ಹೇಳಿದರು.

ಕಾನೂನಿನಂತೆ ಭಾರತೀಯರು ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಭಾರತೀಯರು ವಿದೇಶದಲ್ಲಿ ಪೌರತ್ವ ಪಡೆದುಕೊಂಡರೆ ಅವರು ತಮ್ಮ ಪಾಸ್‌ಪೋರ್ಟ್‌ನ್ನು ಭಾರತೀಯ ಕಾನ್ಸುಲರ್ ಕಚೇರಿಗಳಿಗೆ ಒಪ್ಪಿಸಬೇಕು ಎಂದು ತಿಳಿಸಿದರು.

Comments (0)
Add Comment