60 ಮಂದಿ ಕುಳಿತುಕೊಳ್ಳಬಹುದಾದ ಬಸ್‌ ನಲ್ಲಿ 150 ಜನ: ನಾನು ಬಸ್‌ ಬಿಡಲ್ಲ ಎಂದ ಚಾಲಕ

ಕಡಬ: ಪ್ರಯಾಣಿಕರ ಓವರ್ ಲೋಡ್‌ಗೆ ಭಯಗೊಂಡು ಕೆಎಸ್ಆರ್ ಟಿಸಿ ಬಸ್ ಓಡಿಸಲು ನಿರಾಕರಿಸಿದ ಚಾಲಕ ಘಟನೆ ಕಡಬದಿಂದ ಪುತ್ತೂರಿಗೆ ತೆರಳುವ ಬಸ್‌ ನಲ್ಲಿ ನಡೆದಿದೆ. ಬಸ್ ಅಲಂಕಾರ್ ತಲುಪಿದಾಗ 130 ಮಂದಿ ಬಸ್ ಹತ್ತಿದ್ದರು. ಇದು ವಾಹನದ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಾಗಿತ್ತು. ಅರ್ಧದಷ್ಟು ಪ್ರಯಾಣಿಕರು ಇಳಿಯಬೇಕು ಇಲ್ಲದಿದ್ದರೆ ಬಸ್ ಓಡಿಸಲು ಹೋಗುವುದಿಲ್ಲ ಎಂದು ಚಾಲಕ ಹೇಳಿದರು.

ಇತ್ತೀಚೆಗೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಪುತ್ತೂರಿಗೆ ಹೋಗುವ ಬೆಳಗ್ಗಿನ ಸಂಚಾರಿಸುವ ಒಂದು ಬಸ್ಸನ್ನು ನಿಲ್ಲಿಸಲಾಗಿತ್ತು. ಈ ಹಿನ್ನಲೆ ಬೆಳಗ್ಗಿನ ಆರಂಭದ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಓವರ್ ಲೋಡ್ ಆಗುತ್ತಿತ್ತು. ಇದರಿಂದ ಇತ್ತೀಚೆಗೆ ಬಸ್ ನ ಟಯರ್ ಬ್ಲಾಸ್ಟ್ ಆದ ಘಟನೆ ನಡೆದಿತ್ತು. ಹೀಗಾಗಿ ಬಸ್ ಚಾಲಕನಿಗೆ 5,000 ದಂಡ ಕೂಡ ವಿಧಿಸಲಾಗಿತ್ತು. ಇತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಹಾಕುವಂತೆ ಜನರು ವಿನಂತಿಸಿದರು ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರ ಆರೋಪ. ಈ ಬಸ್ಸಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಇತರ ಪ್ರಯಾಣಿಕರೆಂದು ಸುಮಾರು 150 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಹೀಗಾಗಿ ಚಾಲಕ ಅಪಾಯ ಸಂಭವಿಸಬಹುದು ಎಂದು ಬಸ್ ಟಯರ್ ದುರ್ಬಲವಾಗಿದೆ ನಾನು ಇನ್ನು ಮುಂದೆ ಬಸ್ಸು ಓಡಿಸುವುದಿಲ್ಲ ನಿಲ್ಲಿಸಲಾಯಿತು. ಬಳಿಕ ಪ್ರಯಾಣಿಕ ಒಬ್ಬ ಡಿಪೋಗೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಚಾಲಕ ಬಸ್‌ ಓಡಿಸಲು ಮುಂದಾಗಿದ್ದಾನೆ.

Comments (0)
Add Comment