’70 ವರ್ಷಗಳ ಬಳಿಕ ಕಾಶ್ಮೀರಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ ಮೋದಿ’- ಗವರ್ನರ್ ಮನೋಜ್ ಸಿನ್ಹಾ

ಶ್ರೀನಗರ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷಗಳ ಬಳಿಕ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

ತಮ್ಮ ಮಾಸಿಕ ‘ಆವಾಮ್ ಕಿ ಆವಾಜ್’ ರೇಡಿಯೋ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಸಾಮಾಜಿಕ ನ್ಯಾಯ ಒದಗಿಸಿರುವುದರಿಂದ ಎಲ್ಲರಿಗೂ ಸಮಾನವಾದ ಅವಕಾಶ, ಸಂಪನ್ಮೂಲಗಳು ದೊರೆತಿದೆ. ಇದು ಸಮಾಜದ ಅಂಚಿನಲ್ಲಿರುವ ವರ್ಗಗಳ ಯೋಗಕ್ಷೇಮ, ಸಮೃದ್ಧಿಯನ್ನು ಹೆಚ್ಚಿಸಿದೆ. ಆತ್ಮನಿರ್ಭರ ಜಮ್ಮು ಮತ್ತು ಕಾಶ್ಮೀರವನ್ನು ರಚಿಸಲು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕೇಂದ್ರ ಸರ್ಕಾರದ ಶ್ರಮ ಮೆಚ್ಚುವಂತದ್ದು ಎಂದು ಹೇಳಿದರು.

ಎಲ್ಲರ ಬೆಂಬಲ, ಎಲ್ಲರ ಅಭಿವೃದ್ಧಿ, ಎಲ್ಲರ ನಂಬಿಕೆ ಹಾಗೂ ಎಲ್ಲರ ಪ್ರಯತ್ನ ಎಂಬ ಕನಸು ಅಭಿವೃದ್ಧಿಯ ಅಸಮತೋಲನವನ್ನು ಹೋಗಲಾಡಿಸಿದೆ. ಜನಕೇಂದ್ರಿತ ಆಡಳಿತವಿಲ್ಲದೆ ಯಾವುದೇ ಭವಿಷ್ಯ ಆಧಾರಿತ ಸಮಾಜವು ಪ್ರಗತಿಯಾಗುವುದಿಲ್ಲ. ಆದ್ದರಿಂದ ಬೆಳವಣಿಗೆ ಸಮಾಜದ ಎಲ್ಲಾ ವರ್ಗಗಳನ್ನು ತಲುಪಬೇಕು ಹಾಗೂ ಸಮಾನ ಅವಕಾಶಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಶಯ ಎಂದರು.

Comments (0)
Add Comment