ಹವಮಾನ ಆಧಾರಿತ ವಿಮಾ ಯೋಜನೆಗೆ  ರೈತರಿಂದ ವಿಮಾ ನೋಂದಣಿಗೆ ಅವಕಾಶ

 

 

ದಾವಣಗೆರೆ; ಮರು ವಿನ್ಯಾಸಗೊಳಿಸಲಾದ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ 2023-24ನೇ ಸಾಲಿನ ತೋಟಗಾರಿಕಾ ಬೆಳೆಗಳಿಗೆ ವಿಮಾ ನೋಂದಣಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮರು ವಿನ್ಯಾಸಗೊಳಿಸಿದ ಹವಮಾನ ಆಧಾರಿತ ವಿಮಾ ಯೋಜನೆ: ಅಡಿಕೆ ಬೆಳೆ ವಿಮೆಯನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ, ಎಲ್ಲಾ ಗ್ರಾಮ ಪಂಚಾಯಿತಿಗಳ ರೈತರು, ಕಾಳು ಮೆಣಸು ಬೆಳೆ ವಿಮೆಗೆ ಚನ್ನಗಿರಿ ತಾಲ್ಲೂಕಿನ ಆಯ್ದ ಗ್ರಾಮ ಪಂಚಾಯಿತಿಗಳ ರೈತರು, ದಾಳಿಂಬೆ ಬೆಳೆ ವಿಮೆಗೆ ಚನ್ನಗಿರಿ, ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ ಆಯ್ದ ಗ್ರಾಮಗಳು, ಮಾವು ಬೆಳೆ ವಿಮೆಗೆ ಚನ್ನಗಿರಿ ತಾಲ್ಲೂಕಿನ ಆಯ್ದ ಗ್ರಾಮಗಳು, ವಿಳ್ಯದೆಲೆ ಬೆಳೆ ವಿಮೆಗೆ ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ದಾವಣಗೆರೆ ಮತ್ತು ಹರಿಹರ ತಾಲ್ಲೂಕಿನ ಆಯ್ದ ಗ್ರಾಮಗಳ ರೈತರು ನೋಂದಣಿ ಮಾಡಿಸಬಹುದು.

ರೈತರು ತಮ್ಮ ಬೆಳೆಗಳಿಗೆ ವಿಮಾ ಕಂತನ್ನು ಹತ್ತಿರದ ಬ್ಯಾಂಕ್, ಗ್ರಾಮ ಒನ್, ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ ವಿಮಾ ಯೋಜನೆಗೆ ಪಾವತಿಸಿ ನೋಂದಾಹಿಸಬಹುದು. ನೋಂದಣಿಯಾಗಲು ಜುಲೈ.15 ಕೊನೆಯ ದಿನಾಂಕವಾಗಿರುತ್ತದೆ.

ಹೆಚ್.ಡಿ.ಎಫ್.ಸಿ ಇಆರ್‍ಜಿಓ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯ ಟೋಲ್ ಫ್ರೀ ನಂ.18002660700ಗೆ ಕರೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ತಾಲ್ಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Allowance for insurance registration by farmers for weather based insurance scheme
Comments (0)
Add Comment