BREAKING: ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ʼಗೆ ಹೃದಯಾಘಾತ

ಬೆಂಗಳೂರು: ಸಿನಿಮಾ ನಿರ್ಮಾಪಕ (Producer), ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಜಯದೇವ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಭಾಮಾ ಹರೀಶ್​ ಅವರಿಗೆ ಹೈಬಿಪಿ ಹಾಗೂ ಉಸಿರಾಟದ ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರ ಕುಟುಂಬ ವರ್ಗದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ವರದಿಗಾಗಿ ಕುಟುಂಬ ವರ್ಗದವರು ಕಾಯುತ್ತಿದ್ದಾರೆ. ಭಾಮಾ ಹರೀಶ್​ ಅನೇಕ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ದರ್ಶನ್​ ನಟನೆಯ ಸಿನಿಮಾ ಮೆಜೆಸ್ಟಿಕ್​ ಕೂಡ ಒಂದು. ಇದಲ್ಲದೆ, ಅಯ್ಯೋ ಪಾಂಡು, ಪಾಗಲ್​ ಸಿನಿಮಾಗಳಿನ್ನು ಪ್ರೊಡ್ಯೂಸ್​ ಮಾಡಿದ್ದಾರೆ.

Comments (0)
Add Comment