ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳಿಗೆ ಉಪಚುನಾವಣೆ

 

ದಾವಣಗೆರೆ; ಜಿಲ್ಲೆಯ ನ್ಯಾಮತಿ, ಜಗಳೂರು, ದಾವಣಗೆರೆ, ಚನ್ನಗಿರಿ ಮತ್ತು ಹರಿಹರ ತಾಲ್ಲೂಕುಗಳಲ್ಲಿ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳಿಗೆ ಉಪ ಚುನಾವಣೆ ವೇಳಾ ಪಟ್ಟಿಯನ್ನು ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜು. 12 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಜು 13 ನಾಮಪತ್ರಗಳನ್ನು ಪರಿಶೀಲಿಸುವ ದಿನ. ಉಮೇದುವಾರಿಕೆಗಳನ್ನ ಹಿಂತೆಗೆದುಕೊಳ್ಳಲು ಜು 15 ಕಡೆ ದಿನ. ಮತದಾನ ಅವಶ್ಯವಿದ್ದರೆ ಮತದಾನವನ್ನು ಜು.23 ರಂದು (ಬೆಳಿಗ್ಗೆ 7:00 ಯಿಂದ ಸಂಜೆ 5:00 ವರೆಗೆ) ನಡೆಸಲಾಗುವುದು.  ಜು  26 ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವುದು.

ನ್ಯಾಮತಿ ತಾಲ್ಲೂಕಿನ ಗುಡ್ಡೇಹಳ್ಳಿ ಗ್ರಾ.ಪಂ ವ್ಯಾಪ್ತಿಯ .ಜೀನಹಳ್ಳಿ  ಕ್ಷೇತ್ರದ ಸ್ಥಾನಗಳಿಗೆ  ಸಾಮಾನ್ಯ , ಮಹಿಳೆ ಹಾಗೂ ಅನುಸೂಚಿತ ಜಾತಿ, ಹಾಗೂ ಅನುಸೂಚಿತ ಪಂಗಡ, ಸಾಮಾನ್ಯ ಮಹಿಳೆಯರಿಗೆ ಮೀಸಲಾತಿ ಇರುತ್ತದೆ.

ಜಗಳೂರು ತಾಲ್ಲೂಕಿನ ಅಣಬೂರು ಗ್ರಾ.ಪಂ ವ್ಯಾಪ್ತಿಯ ದೊಡ್ಡಬೊಮ್ಮನಹಳಿ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮತ್ತು ಸಾಮಾನ್ಯ (ಮಹಿಳೆ) ಮೀಸಲಾತಿ ಇರುತ್ತದೆ.

ದಾವಣಗೆರೆ ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೆಚ್.ಬಸಾಪುರ ಕ್ಷೇತ್ರದ ಸ್ಥಾನಕ್ಕೆ ಸಾಮಾನ್ಯ  ಮೀಸಲಾತಿ,

ಚನ್ನಗಿರಿ ತಾಲ್ಲೂಕಿನ ಮುದಿಗೆರೆ ಗ್ರಾ.ಪಂ ವ್ಯಾಪ್ತಿಯ ಬಿಲ್ಲಹಳ್ಳಿ ಕ್ಷೇತ್ರಕ್ಕೆ ಸಾಮಾನ್ಯ (ಮಹಿಳೆ) ಮತ್ತು ಅಜ್ಜಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಚಿಕ್ಕುಲಿಕೆರೆ ಕ್ಷೇತ್ರದ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ,

ಹರಿಹರ ತಾಲ್ಲೂಕಿನ ಸಾರಥಿ ಗ್ರಾ.ಪಂ ವ್ಯಾಪ್ತಿಯ ದೀಟೂರು-1 ಕ್ಷೇತ್ರಕ್ಕೆ ಅನುಸೂಚಿತ ಜಾತಿ, ಹಿಂದೂಳಿದ ವರ್ಗ ‘ಅ’, ಸಾಮಾನ್ಯ (ಮಹಿಳೆ) ದೀಟೂರು-2 ಕ್ಷೇತ್ರಕ್ಕೆ ಹಿಂದುಳಿದ ವರ್ಗ’ಬ’ ಮತ್ತು ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ  ಮೀಸಲಾತಿ ಇರುತ್ತದೆ.

ಕೊಂಡಜ್ಜಿ ಗ್ರಾ.ಪಂ ವ್ಯಾಪ್ತಿಯ ಗಂಗನರಸಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ’ಅ’ ಮತ್ತು ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ, ಗಂಗನರಸಿ-2 ಕ್ಷೇತ್ರಕ್ಕೆ ಪ.ಜಾ ಮಹಿಳೆ ಮತ್ತು  ಸಾಮಾನ್ಯ ಮೀಸಲಾತಿ ಇರುತ್ತದೆ.

ಎಳೆಹೊಳೆ ಗ್ರಾ.ಪಂ ವ್ಯಾಪ್ತಿಯ ಮಳಲಹಳ್ಳಿ ಕ್ಷೇತ್ರಕ್ಕೆ ಪ.ಪಂ ವರ್ಗದವರಿಗೆ ಮೀಸಲಾತಿ ನೀಡಲಾಗಿದೆ.

By-election to the posts of Gram Panchayat members
Comments (0)
Add Comment