ತೋಟಗಾರಿಕೆ ಬೆಳೆಗಳಿಗೆ ಫಸಲ್ ಬಿಮಾ ಯೋಜನೆ ನೋಂದಣಿ ಆರಂಭ

 

ಚಿತ್ರದುರ್ಗ: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದೆ.

ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಟೊಮ್ಯಾಟೋ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ವಿಮೆ ನೊಂದಣಿ ಮಾಡಬಹುದು.

ತೋಟಗಾರಿಕೆ ಬೆಳೆಗಳ ವಿವರ: 2023ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ಅಧಿಸೂಚಿತ ತೋಟಗಾರಿಕೆ ಬೆಳೆಗಳ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕು ಕಸಬಾ, ತುರುವನೂರು ಹಾಗೂ ಹಿರೇಗುಂಟನೂರು ಹೋಬಳಿ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ), ಭರಮಸಾಗರ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೊ). ಚಳ್ಳಕೆರೆ ತಾಲ್ಲೂಕಿನ ಕಸಬಾ, ನಾಯಕನಹಟ್ಟಿ, ಪರುಶುರಾಂಪುರ ಹಾಗೂ ತಳಕು ಹೋಬಳಿಗೆ (ಈರುಳ್ಳಿ ನೀರಾವರಿ, ಟೊಮೋಟೊ) ಹಿರಿಯೂರು ತಾಲ್ಲೂಕು ಕಸಬಾ ಹಾಗೂ ಧರ್ಮಪುರ ಹೋಬಳಿಗೆ (ಈರುಳ್ಳಿ ನೀರಾವರಿ), ಐಮಂಗಲ, ಜೆ.ಜಿ.ಹಳ್ಳಿ ಹೋಬಳಿಗೆ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ). ಹೊಳಲ್ಕೆರೆ ತಾಲ್ಲೂಕು ಕಸಬಾ ಹೋಬಳಿ (ಈರುಳ್ಳಿ ನೀರಾವರಿ), ರಾಮಗಿರಿ ಹಾಗೂ ತಾಳ್ಯ ಹೋಬಳಿ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ, ಟೊಮೋಟೊ). ಹೊಸದುರ್ಗ ತಾಲ್ಲೂಕು ಕಸಬಾ ಹೋಬಳಿ (ಈರುಳ್ಳಿ ಮಳೆಯಾಶ್ರಿತ, ಟೊಮೊಟೊ, ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ). ಮೊಳಕಾಲ್ಮುರು ತಾಲ್ಲೂಕು ದೇವಸಮುದ್ರ ಹಾಗೂ ಕಸಬಾ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೊ, ಕೆಂಪು ಮೆಣಸಿನ ಕಾಯಿ ಮಳೆಯಾಶ್ರಿತ).

ವಿಮಾ ಕಂತಿನ ವಿವರ: ಟೊಮ್ಯಾಟೋ ಬೆಳೆಯ ವಿಮೆ ಮೊತ್ತ ಹೆಕ್ಟೇರ್‍ಗೆ ರೂ.141500 ಇದ್ದು, ರೈತರ ವಿಮಾ ಕಂತು ರೂ.7075 ಆಗಿದೆ. ನೀರಾವರಿ ಈರುಳ್ಳಿ ವಿಮೆ ಮೊತ್ತ ಹೆಕ್ಟೇರ್‍ಗೆ ರೂ.80500 ಇದ್ದು, ರೈತರ ವಿಮಾ ಕಂತು ರೂ.4025 ಆಗಿದೆ. ಮಳೆ ಆಶ್ರಿತ ಈರುಳ್ಳಿ ವಿಮಾ ಮೊತ್ತ ಹೆಕ್ಟೇರ್‍ಗೆ ರೂ. 75750  ಆಗಿದ್ದು, ರೈತರ ಮಿಮಾ ಕಂತು ರೂ.3787.50 ಆಗಿದೆ. ಮಳೆ ಆಶ್ರಿತ ಕೆಂಪು ಮೆಣಸಿಕಾಯಿ ಮಿಮಾ  ಮೊತ್ತ ಹೆಕ್ಟೇರ್‍ಗೆ ರೂ.78750 ಆಗಿದ್ದು, ರೈತರ ಮಿಮಾ ಕಂತು 3937.50 ಆಗಿದೆ. ಅಧಿಸೂಚಿತ ಬೆಳೆಗಳ ವಿಮೆಯನ್ನು ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಹಾಗೂ ಆರ್ಥಿಕ ಸಂಸ್ಥೆಗಳ ನೊಂದಣಿ ಮಾಡಬಹುದು.

ನೀರಾವರಿ ಆಶ್ರಿತ ಈರುಳ್ಳಿ ಬೆಳೆ ವಿಮೆ ನೊಂದಣಿಗೆ ಜುಲೈ 15 ಕಡೆಯ ದಿನ. ಉಳಿದಂತೆ ಮಳೆ ಆಶ್ರಿತ ಈರುಳ್ಳಿ, ಟೋಮ್ಯಾಟೊ ಹಾಗೂ ಕೆಂಪು ಮೆಣಸಿಕಾಯಿ ಬೆಳೆ ವಿಮೆಗೆ ಜುಲೈ 31 ಕಡೆಯ ದಿನವಾಗಿದೆ.  ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ವಿಮಾ ಕಂಪನಿಯಾಗಿ ಜಿಲ್ಲೆಗೆ ನಿಗಧಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಹತ್ತಿರದ ಬ್ಯಾಂಕುಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Crop insurance scheme registration for horticulture crops started
Comments (0)
Add Comment