Darling: ಡಾರ್ಲಿಂಗ್ ಅಂತಾ ಕರೆದರೆ ಕ್ರಿಮಿನಲ್​ ಅಪರಾಧ: ಯಾಕೆ? ಏನು? ವಿವರಣೆ ಇಲ್ಲಿದೆ

ಇನ್ನು ಮುಂದೆ ಕಂಡ ಕಂಡಲ್ಲಿ ಡಾರ್ಲಿಂಗ್ ಅನ್ನೋ ಪದ ಬಳಸುವ ಮುನ್ನ ಎಚ್ಚರ. ನಿಮ್ಮ ಪ್ರೀತಿ ಪಾತ್ರರನ್ನು ಡಾರ್ಲಿಂಗ್‌ ಎಂದು ಕರೆದು ಪ್ರೀತಿಯಿಂದ ಮಾತನಾಡಿ, ಆದರೆ ಅದೇ ಪದವನ್ನು ಅಭ್ಯಾಸ ಮಾಡಿಕೊಂಡರೆ ನಿಮಗೆ ತೊಂದರೆ. ಡಾರ್ಲಿಂಗ್..ಡಾರ್ಲಿಂಗ್.. ಎಂದು ಅನೇಕ ಬಾರಿ ಕರೆದು ಅದನ್ನೇ ಅಭ್ಯಾಸ ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಬಾಯಿತಪ್ಪಿ ಕೂಡ ಡಾರ್ಲಿಂಗ್ ಎನ್ನಬೇಡಿ. ಈ ಡಾರ್ಲಿಂಗ್ ಎನ್ನುವ ಪದ ಅಷ್ಟೊಂದು ಅಪಾಯಕಾರಿನಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಿಮ್ಮ ಪ್ರೀತಿ ಪಾತ್ರರು ಅಥವಾ ನಿಮ್ಮ ಆತ್ಮೀಯರನ್ನು ಬಿಟ್ಟು ಅಪರಿಚಿತರನ್ನು ಡಾರ್ಲಿಂಗ್​ ಎಂದು ಕರೆದರೆ ಕ್ರಿಮಿನಲ್​ ಅಪರಾಧವಾಗುತ್ತದೆ ಎಂದು ಕೋಲ್ಕತ್ತಾ ಹೈಕೋರ್ಟ್​ ತಿಳಿಸಿದೆ. ಮಹಿಳಾ ಪೇದೆಯೊಬ್ಬರ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್​ ಅಪರಿಚಿತ ಮಹಿಳೆಯರನ್ನು ಡಾರ್ಲಿಂಗ್​ ಎಂದು ಕರೆದರೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ದಾಖಲಾಗುತ್ತದೆ ಎಂದು ಕೋರ್ಟ್​ ಹೇಳಿದೆ. ಐಪಿಸಿ ಸೆಕ್ಷನ್​ 354A ಮತ್ತು 509ರ ಅಡಿಯಲ್ಲಿ ಇದು ಕ್ರಿಮಿನಲ್​ ಅಪರಾಧವಾಗುತ್ತದೆ ಎಂದು ಕೋರ್ಟ್‌ ವಿವರಿಸಿದೆ.

ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಗೆ ಡಾರ್ಲಿಂಗ್ ಎಂದು ಕರೆದಿರುವ ಪ್ರಕರಣ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಜೆ ಸೇನ್​ಗುಪ್ತಾ ವಾದ-ಪ್ರತಿವಾದಗಳನ್ನು ಆಲಿಸಿ ಪರಿಚಿತರನ್ನು ಡಾರ್ಲಿಂಗ್​ ಎಂದು ಕರೆದರೆ. ಸೆಕ್ಷನ್​ 354A ಅಡಿಯಲ್ಲಿ ಲೈಂಗಿಕ ಕಿರುಕುಳ ಅಪರಾಧಕ್ಕೆ ಇದು ಸೇರುತ್ತದೆ ಎಂದು ಹೇಳಿದ್ದಾರೆ.

ಕೋಲ್ಕತ್ತಾ ಹೈಕೋರ್ಟ್ ಪ್ರಕಾರ ಯಾವ ವ್ಯಕ್ತಿಯೂ ಮಹಿಳೆಯನ್ನು ನಿಂದಿಸುವಂತಿಲ್ಲ. ಪರಿಚಿತ ಮಹಿಳೆ, ಪೊಲೀಸ್​​ ಪೇದೆ ಅಥವಾ ಯಾರೇ ಆಗಲಿ, ಆಕೆಯನ್ನು ನಿಂದಿಸುವ ಉದ್ದೇಶದಿಂದ ಡಾರ್ಲಿಂಗ್​ ಎಂದು ಕರೆದ ವ್ಯಕ್ತಿ ಕುಡಿದಿರಲಿ ಅಥವಾ ಇಲ್ಲದಿರಲಿ, ಯಾರೇ ಆಗಲಿ ಅವರ ವಿರುದ್ಧ ಸೆಕ್ಷನ್​ 354A ಅಡಿಯಲ್ಲಿ ಲೈಂಗಿಕ ಕಿರುಕುಳ ಅಡಿಯಲ್ಲಿ ಪ್ರಕರಣ ದಾಖಲಾಗಲಿದೆ. ಅಪರಿಚಿತರಿಗೆ ಡಾರ್ಲಿಂಗ್​ ಎನ್ನುವುದು ಆಕ್ಷೇಪಾರ್ಹ ಎಂದು ಕೋಲ್ಕತ್ತಾ ಹೈಕೋರ್ಟ್‌ ಪೀಠವು ವಿವರಿಸಿದೆ.

Comments (0)
Add Comment