ಮನುಷ್ಯನ ವಯಸ್ಸನ್ನೇ ಯೌವನಕ್ಕೆ ಬದಲಿಸುವ ಔಷಧಿ ಅಭಿವೃದ್ಧಿ.!

 

ನವದೆಹಲಿ: ಎಸ್ .ಹಾರ್ವರ್ಡ್‌ ವಿವಿ ವಿಜ್ಞಾನಿಗಳು ಮನುಷ್ಯನ ವಯಸ್ಸನ್ನೇ ಯೌವನಕ್ಕೆ ಬದಲಿಸುವ ಔಷಧೀಯ ಕಾಕ್‌ಟೈಲ್‌ ಅಭಿವೃದ್ಧಿಪಡಿಸಿದ್ದಾರೆ.

ಏಜಿಂಗ್‌ ಜರ್ನಲ್‌ನಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟಿಸಲಾಗಿದೆ. ವಿಜ್ಞಾನಿಗಳು 6 ಕೆಮಿಕಲ್‌ ಕಾಕ್‌ಟೈಲ್‌ ಸಿದ್ಧಪಡಿಸಿದ್ದು, ಇದು ಮನುಷ್ಯರು ಹಾಗೂ ಇಲಿಗಳ ಚರ್ಮದಲ್ಲಿರುವ ಕೋಶಗಳಲ್ಲಿ ವಯಸ್ಸನ್ನು ಯೌವನಕ್ಕೆ ಮರಳಿಸಿದೆ.

ವಂಶವಾಹಿ ಚಿಕಿತ್ಸೆ ಮೂಲಕ ಯೌವನಕ್ಕೆ ಮರಳಲು ಸಾಧ್ಯವೆಂದು ಹಾರ್ವರ್ಡ್‌ ಸಂಶೋಧಕ ಡೇವಿಡ್‌ ಸಿಂಕ್ಲೇರ್‌  ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

Development of medicine that changes the age of man to youth.
Comments (0)
Add Comment