ಪಿಯು ಪರೀಕ್ಷೆಯಲ್ಲೂ 20 ಆಂತರಿಕ ಅಂಕಗಳ ನಿಗದಿ.!

 

ಬೆಂಗಳೂರು: ಪಿಯು ಪರೀಕ್ಷೆಯಲ್ಲೂ 20 ಆಂತರಿಕ ಅಂಕಗಳನ್ನು ನಿಗದಿ ಮಾಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ನಿಯಮ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ (2023–24) ಅನ್ವಯವಾಗಲಿದೆ.

ಆಂತರಿಕ ಅಂಕಗಳನ್ನು ಆಯಾ ವಿಷಯಗಳ ಉಪನ್ಯಾಸಕರು ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿ ದಾಖಲಿಸಬೇಕು. ಕಿರು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 10 ಹಾಗೂ ಪ್ರಾಜೆಕ್ಟ್ ವರ್ಕ್ ಹಾಗೂ ಅಸೈನ್ಮೆಂಟ್ ಆಧಾರದಲ್ಲಿ 10 ಅಂಕಗಳನ್ನು ನಿಗದಿ ಮಾಡಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಭೌತವಿಜ್ಞಾನ, ರಸಾಯನವಿಜ್ಞಾನ, ಸಂಗೀತ, ಗೃಹ ವಿಜ್ಞಾನ ಮೊದಲಾದ ವಿಷಯಗಳಲ್ಲಿ ಆಂತರಿಕ ಮೌಲ್ಯಮಾಪನ ಇರುವುದಿಲ್ಲ. ಅಂತಹ ವಿಷಯಗಳಲ್ಲಿ ಯಥಾಸ್ಥಿತಿ ಮುಂದುವರಿಸಲಾಗುತ್ತದೆ. ಭಾಷಾ ಹಾಗೂ ಐಚ್ಛಿಕ ವಿಷಯಗಳಲ್ಲಿ ಆಂತರಿಕ ಅಂಕ ಕಡ್ಡಾಯಗೊಳಿಸಲಾಗಿದೆ. ಉಳಿದ 80 ಅಂಕಗಳಿಗೆ ಪರೀಕ್ಷೆ ನಡೆಸಬೇಕು. ತೇರ್ಗಡೆಯಾಗಲು ವಿದ್ಯಾರ್ಥಿಗಳು ಕನಿಷ್ಠ 24 ಅಂಕಗಳನ್ನು ಪಡೆಯಬೇಕು. ಆಂತರಿಕ ಅಂಕಗಳನ್ನು ನಿಗದಿತ ಸಮಯದ ಒಳಗೆ ಪೋರ್ಟಲ್ಗೆ ಅಪ್ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.

 

Comments (0)
Add Comment