ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ.!

 

ದೆಹಲಿ:ಬ್ಯಾಟರಿ ಹಾಗೂ ಅನಗತ್ಯವಾಗಿ ಡೇಟಾ ತಿನ್ನುತ್ತಿದ್ದ 43 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಪತ್ತೆಹಚ್ಚಿದ್ದು, ಇವುಗಳನ್ನು ಡಿಲೀಟ್ ಮಾಡುವಂತೆ ತನ್ನ ಬಳಕೆದಾರರಿಗೆ ಸೂಚಿಸಿದೆ.

ಈ ಆ್ಯಪ್‌ಗಳು ಗೂಗಲ್ ನಿಯಮ ಮೀರಿದ್ದು, ಫೋನ್ ಆಫ್ ಮಾಡಿದ ಬಳಿಕವೂ ಜಾಹೀರಾತು ಪ್ರದರ್ಶಿಸುತ್ತಿದ್ದವು. ಇವುಗಳಲ್ಲಿ ಟಿವಿ/ ಡಿಎಂಬಿ ಪ್ಲೇಯರ್ಸ್, ಮ್ಯೂಸಿಕ್, ನ್ಯೂಸ್ ಹಾಗೂ ಕ್ಯಾಲೆಂಡರ್ ಆ್ಯಪ್ ಸೇರಿಕೊಂಡಿವೆ. ಫೋನ್ ಸೆಟ್ಟಿಂಗ್ಸ್ ನಲ್ಲಿ ಬ್ಯಾಟರಿ ಪರಿಶೀಲಿಸಿ ಇಂಥ ಆ್ಯಪ್ ಡಿಲೀಟ್ ಮಾಡಬಹುದಾಗಿದೆ.

delete them immediately.If you have these apps in your mobile
Comments (0)
Add Comment