KSRTC, BMTC ಬಸ್‌ಗಳಲ್ಲಿ ಕಂಡಕ್ಟರ್ 10 ರೂ. ಕಾಯಿನ್ ತೆಗೆದುಕೊಳ್ಳಲೇ ಬೇಕು : ಸಾರಿಗೆ ಇಲಾಖೆ ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು KSRTC, BMTC ಬಸ್‌ಗಳಲ್ಲಿ ಕಂಡಕ್ಟರ್ 10 ರೂ. ಕಾಯಿನ್ ತೆಗೆದುಕೊಳ್ಳಬೇಕೆಂದು ರಾಜ್ಯದ ಬಸ್‌ ಕಂಡಕ್ಟರ್‌ಗಳಿಗೆ ಸಾರಿಗೆ ಇಲಾಖೆ ಸೂಚನೆಯೊಂದನ್ನು ನೀಡಿದೆ.

ರಾಜ್ಯದಲ್ಲಿ ಇಷ್ಟು ಸಮಯ ಕೆಲವು ಬಸ್ ಗಳಲ್ಲಿ ೧೦ ರೂ ಕಾಯಿನ್ ಅನ್ನು ಕೊಟ್ಟರೆ ಕಂಡಕ್ಟರ್ ಗಳು ಸ್ವೀಕರಿಸುತ್ತಿರಲಿಲ್ಲ 10 ರೂಪಾಯಿ ನಾಣ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿಯು ತಿಳುವಳಿಕೆ ಪತ್ರದ ಮೂಲಕ ಎಲ್ಲಾ ನಿಗಮಗಳಿಗೂ ಸೂಚನೆ ನೀಡಿದೆ.

ಕೆಎಸ್ ಆರ್ ಟಿಸಿ, ಬಿಎಂಟಿಸಿ , ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ನಿಗಮಕ್ಕೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದ್ದು, ಬಸ್ ಪ್ರಯಾಣದ ವೇಳೆ ಪ್ರಯಾಣಿಕರು 10 ರೂ. ನಾಣ್ಯ ನೀಡಿದರೆ ಪಡೆಯಬೇಕು. ಒಂದು ವೇಳೆ 10 ರೂ. ನಾಣ್ಯ ಪಡೆಯದೇ ಇದ್ದರೆ, ಈ ಬಗ್ಗೆ ಪ್ರಯಾಣಿಕರಿಂದ ದೂರು ಬಂದರೆ ಆ ಬಸ್ಸಿನ ನಿರ್ವಾಹಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

Comments (0)
Add Comment