ಕ್ರಾಂತಿಕಾರಿ ಕವಿ ಜನರಧ್ವನಿ ಗದ್ದರ್ ನಿಧನ.!

 

ಹೈದರಬಾದ್: ತೆಲಂಗಾಣದ ಕ್ರಾಂತಿಕಾರಿ ಕವಿ ಮತ್ತು ಹಾಡುಗಾರ ಗದ್ದರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

1949ರಲ್ಲಿ ತುಫ್ರಾನ್‌ನಲ್ಲಿ ಜನಿಸಿದ ಗದ್ದರ್ ಅವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ತಮ್ಮ ಹಾಡುಗಳ ಮೂಲಕ ತೆಲಂಗಾಣ ಚಳವಳಿಯ ಆರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜನ ಸಂಸ್ಕೃತಿಯ ಭಾಗವಾದ ಜನಪದ ಹಾಡುಗಳಿಗೆ ಕ್ರಾಂತಿಕಾರಿ ಸ್ಪರ್ಶ ನೀಡಿ ಹೋರಾಟದ ಹಾಡುಗಳಿಗೆ ಹೊಸ ಆಯಾಮ ನೀಡಿದ್ದರು. ಅವರು ನಿಧನರಾಗಿದ್ದಾರೆ.

Revolutionary poet Janaradhwani Gaddar passed away.
Comments (0)
Add Comment