SSLC ಪರೀಕ್ಷೆ: ದ್ವಾರದ ಕಡೆ ಮುಖ ಮಾಡುವಂತಿಲ್ಲ!

SSLC ಪರೀಕ್ಷೆ ಮಾ.25ರಿಂದ ಆರಂಭವಾಗಲಿದ್ದು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ ದ್ವಾರಕ್ಕೆ ವಿರುದ್ಧ ಮುಖ ಮಾಡಿ ಕುಳಿತು ಪರೀಕ್ಷೆ ಬರೆಯುವುದಕ್ಕೆ ಆಸನ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ ಸೂಚಿಸಿದೆ. ಇದರಿಂದ ಅಕ್ರಮ ಎಸಗಿದರೆ ದ್ವಾರದಲ್ಲೇ ಸುಲಭವಾಗಿ ಗೊತ್ತಾಗಲಿದೆ.

ಸಾಮಾನ್ಯವಾಗಿ ಕೊಠಡಿಗಳಲ್ಲಿ ಪ್ರವೇಶ ದ್ವಾರದ ಕಡೆ ಮುಖ ಮಾಡಿ ಕುಳಿತಿರುತ್ತಾರೆ.

ಆದರೆ ಇದನ್ನು ತಪ್ಪಿಸಿದರೆ ಅಕ್ರಮ ತಡೆಯಬಹುದು. ವಿದ್ಯಾರ್ಥಿಗಳಿಗೆ ಬಯಲಿನಲ್ಲಿ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಬಾರದೆಂದು ಸೂಚಿಸಲಾಗಿದೆ.

Comments (0)
Add Comment