UPSC ಪರೀಕ್ಷೆಯಲ್ಲಿ 116 ನೇ ರ‍್ಯಾಂಕ್‌ ಗಳಿಸಿದ ಆಶ್ನಾ

ನವದೆಹಲಿ: ನಮ್ಮ ಸತತ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ UPSC ಪರೀಕ್ಷೆಯಲ್ಲಿ 116 ನೇ ರ‍್ಯಾಂಕ್‌ ಗಳಿಸಿದ ಆಶ್ನಾ ಚೌಧರಿಯವರೇ ಸಾಕ್ಷಿ. ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿರುವ ಯುಪಿಎಸ್ ಸಿ ಅನ್ನು ಮೂರನೇ ಪ್ರಯತ್ನದಲ್ಲಿ 116 ನೇ ರ‍್ಯಾಂಕ್‌ ಗಳಿಸುವ ಮೂಲಕ ಆಶ್ನಾ ಚೌಧರಿ ಅನೇಕರಿಗೆ ಮಾದರಿಯಾಗಿದ್ದಾರೆ.

ಗಾಜಿಯಾಬಾದ್‌ನ ಆಶ್ನಾ ಚೌಧರಿ ಅವರು 2019 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದು ಬಳಿಕ ದೆಹಲಿಯಲ್ಲಿರುವ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪದವಿಯ ನಂತರ ಆಶ್ನಾ 1 ವರ್ಷ ವಿರಾಮ ತೆಗೆದು UPSC ಪರೀಕ್ಷೆಗೆ ತಯಾರಿ ಆರಂಭಿಸಿದ್ದಾರೆ.

ಇನ್ನು ಆಶ್ನಾ ಚೌಧರಿ ಯುಪಿಎಸ್ ಸಿ ಪರೀಕ್ಷೆಯ ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ ವಿಫಲರಾಗಿದ್ದು, ತಮ್ಮ ಮೂರನೇ ಪ್ರಯತ್ನದಲ್ಲಿ UPSC CSE 2022 ಪರೀಕ್ಷೆಯಲ್ಲಿ 116 ನೇ ರ್ಯಾಂಕ್ ಗಳಿಸಿ ಅನೇಕರಿಗೆ ಮಾದರಿಯಾಗಿದ್ದಾರೆ.

ಪದವಿ ಮುಗಿದ ನಂತರವೇ UPSC ಪರೀಕ್ಷೆ ನೀಡಲು ನಿರ್ಧರಿಸಿದ್ದ ಆಶ್ನಾ ಅವರು ಇಡೀ ಪಠ್ಯಕ್ರಮವನ್ನು ಸ್ಕ್ಯಾನ್ ಮಾಡಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನೋಡಿ ನಂತರ ತನ್ನ ತಂತ್ರಗಾರಿಕೆಯನ್ನು ರೂಪಿಸಿದ್ದರು.
ಮೊದಲ ಯತ್ನದಲ್ಲಿ ವಿಫಲವಾದರೂ ಛಲ ಬಿಡದ ಆಶ್ನಾ ಅವರು ತಮ್ಮ ಸತತ ಪ್ರಯತ್ನದಿಂದ ಮೂರನೇ ಪ್ರಯತ್ನದಲ್ಲಿ 116 ನೇ ರ‍್ಯಾಂಕ್‌ ಗಳಿಸಿದ್ದಾರೆ.

Comments (0)
Add Comment