ಕೊತ್ತಂಬರಿ ಸೊಪ್ಪು ಸೇವನೆಯಿಂದ ಆಗುವ ಪ್ರಯೋಜನಗಳೇನು?

 

ಮೂತ್ರಪಿಂಡವನ್ನು ಸ್ವಚ್ಛಗೊಳಿಸಲು ಇದು ಪರಿಣಾಮಕಾರಿಯಾಗಿದೆ. ಕೊತ್ತಂಬರಿ ಸೊಪ್ಪನ್ನು ತುಂಡು ಮಾಡಿ ಒಂದು ಬೌಲ್ ನೀರಿನಲ್ಲಿ ಒಂದು ಗಂಟೆ ನೆನೆಸಿಡಿ. ನಂತರ ಅದನ್ನು ಒಲೆಯ ಮೇಲೆ ಇಟ್ಟು 10 ನಿಮಿಷ ಕುದಿಸಿ ತಣಿಯಲು ಬಿಡಿ. ನಂತರ ಕುಡಿಯಿರಿ. ವಾರಕ್ಕೊಮ್ಮೆ ಒಂದು ಲೋಟ ಕೊತ್ತಂಬರಿ ಸೊಪ್ಪಿನ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ವಚ್ಛವಾಗುತ್ತದೆ. ಫಿಲ್ಟರ್ ಮಾಡದೇ ಕುಡಿಯಬೇಕು.

ಮಹಿಳೆಯರು ಕೊತ್ತಂಬರಿ ಸೊಪ್ಪಿನ ನೀರನ್ನು ಕುಡಿಯುವುದರಿಂದ ಮುಟ್ಟಿನ ಸಮಸ್ಯೆ ದೂರವಾಗುತ್ತದೆ. ಹಾಗೆಯೇ ಗರ್ಭಿಣಿಯರು ಪ್ರತಿದಿನ 2 ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ನಿಂಬೆ ರಸದೊಂದಿಗೆ ಸೇವಿಸಿದರೆ ಹೊಟ್ಟೆನೋವು, ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ಕೊತ್ತಂಬರಿ ಸೊಪ್ಪನ್ನು ಎಲ್ಲಾ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕೊತ್ತಂಬರಿ ಸೊಪ್ಪಿನ ಚಟ್ನಿಯೂ ಮಾಡುವವರಿದ್ದಾರೆ. ಆದರೆ ಇದನ್ನು ಪದಾರ್ಥಗಳಲ್ಲಿ ಬಳಸುವುದರಿಂದ ಸೇವನೆ ಮಾಡಿದ ಆಹಾರವು ಬೇಗನೆ ಜೀರ್ಣವಾಗುತ್ತದೆ.

ಕೊತ್ತಂಬರಿ ಸೊಪ್ಪನ್ನೂ ಹೀಗೆ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

ಒಂದು ಲೋಟ ಮಜ್ಜಿಗೆಗೆ ಒಂದು ಚಮಚ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಚಿಟಿಕೆ ಜೀರಿಗೆ ಸೇರಿಸಿ ರಾತ್ರಿ ಊಟದ ನಂತರ ಕುಡಿಯಬೇಕು. ಹೀಗೆ ಪ್ರತಿನಿತ್ಯ ಕುಡಿಯುವುದರಿಂದ ಹೊಟ್ಟೆ ಉರಿ, ಕರುಳು ಉರಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಬಾಯಿಯ ದುರ್ವಾಸನೆಯನ್ನೂ ಕಡಿಮೆ ಮಾಡುತ್ತದೆ. ವಸಡಿನ ರಕ್ತಸ್ರಾವಕ್ಕೆ ಪರಿಹಾರವಾಗಿದೆ.

 

What are the benefits of consuming coriander leaves?
Comments (0)
Add Comment