ಕನ್ನಡ ಚಿತ್ರರಂಗದಲ್ಲಿ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಯುವ ಜನರ ಹೃದಯ ಕದ್ದ ನಾಯಕಿ ಅಮೂಲ್ಯ. ಚೆಲುವಿನ ಚಿತ್ತಾರದಲ್ಲಿ‌ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ನಟಿಸಿ ಗೋಲ್ಡನ್ ಕ್ವೀನ್ ಪಟ್ಟ ಪಡೆದ ಅಮೂಲ್ಯ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕಳೆದ ವರ್ಷ ಮದುವೆ ಮಾಡಿಕೊಂಡ ನಟಿ ಅಮೂಲ್ಯ ಅವರು ಜಗದೀಶ್ ಅವರ ಜೊತೆ ಸಪ್ತಪದಿ ತುಳಿದ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಇಂದು ತಮ್ಮ ‌ಜನ್ಮದಿನವನ್ನು ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಆಚರಿಸಿಕೊಂಡಿರುವ ಫೋಟೋಗಳು‌ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ವಿಶೇಷವೆಂದರೆ ಈ ಬಾರಿ ಅಮೂಲ್ಯ ಜನ್ಮದಿನಕ್ಕೆ ಡಬಲ್ ಸರ್ಫೈಸ್ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಹ ಅಮೂಲ್ಯ ಅವರ ಜನ್ಮದಿನದ ಸಡಗರದಲ್ಲಿ ಭಾಗಿಯಾಗಿದ್ದಾರೆ.ಹಲವು ದಿನಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ ಮತ್ತು ವಿಜಯಲಕ್ಷ್ಮಿ ಅವರು ಜೊತೆಯಾಗಿ ಇರುವ ಸೆಲ್ಫೀ ಫೋಟೋಸ್ ಈಗ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಡುತ್ತಿದೆ.

ಇನ್ನು ಅಮೂಲ್ಯ ಅವರ ಜನ್ಮದಿನದ ಪಾರ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ , ವಿಜಯಲಕ್ಷ್ಮಿ , ಅಮೂಲ್ಯ , ಜಗದೀಶ್ ಮತ್ತು ಅಮೂಲ್ಯ ಅವರ ಮಾವ ಸಹ ಭಾಗವಹಿಸಿರುವ ಫೋಟೋಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಬಗ್ಗೆ ಅಮೂಲ್ಯ ಸಹ ಖುಷಿ ವ್ಯಕ್ತಪಡಿಸಿದ್ದು ಈ ಬಾರಿಯ ಜನ್ಮದಿನವನ್ನು ಡಿ ಬಾಸ್ ಜೊತೆ ಆಚರಣೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ‌. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಮೂಲ್ಯ ಅವರು ತಂಗಿಯಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here