ಫ್ರೀಡಂ ಪಾರ್ಕಿನಲ್ಲಿ ಇಂದು ಹಿಂದು ಮುಸ್ಲಿಮ್ ಸಿಖ್ ಇಸಾಯಿ ಫೌಂಡೇಶನ್ ಆಯೋಜನೆ ಮಾಡಿದ್ದ ಸಿಎಎ ವಿರುದ್ಧದ ಪ್ರತಿಭಟನೆ ಈಗ ರಾಜ್ಯದಲ್ಲೆಡೆ ಸುದ್ದಿಯ ಕೇಂದ್ರವಾಗಿದೆ. ಇದಕ್ಕೆ ಕಾರಣವಾಗಿದ್ದು ಚಿಕ್ಕಮಗಳೂರು ಮೂಲದ ಅಮೂಲ್ಯ ಲಿಯೋನ ಎಂಬ ಯುವತಿ. ಪ್ರಕರಣದ ನಂತರ ಆಕೆಗೆ ಅಲ್ಲಿ ಆಹ್ವಾನ ಇಲ್ಲದಿದ್ದರೂ ಬಂದು ಮುಜುಗರ ಉಂಟು ಮಾಡಿದ್ದಾಳೆ ಎನ್ನಲಾಗುತ್ತಿದೆ. ಏಕೆಂದರೆ ಅಲ್ಲಿ ಅಮೂಲ್ಯ ಪಾಕಿಸ್ತಾನದ ಪರ ಘೋಷಣೆಯನ್ನು ಕೂಗುವ ಮೂಲಕ ದೇಶ ವಿರೋಧಿ ಘೋಷಣೆ ಆರೋಪದ ಮೇಲೆ ಈಗ ಬಂಧಿಸಲ್ಪಿಟ್ಟಿದ್ದು, ಎಲ್ಲೆಡೆ ಆಕೆಯ ವರ್ತನೆಯನ್ನು ಖಂಡಿಸಲಾಗುತ್ತಿದೆ.

ಇದೇ ವಿಷಯದ ಕುರಿತಾಗಿ ಮಾತನಾಡಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗ್ಡೆ ಅವರು ಸಿಎಎ ವಿರುದ್ಧ ನಡೆದ ಈ ಹೋರಾಟದಲ್ಲಿ ಅಮೂಲ್ಯ ಲಿಯೋನ ಜೊತೆಯಲ್ಲಿ ವೇದಿಕೆಯ ಮೇಲೆ ಇದ್ದ ಎಲ್ಲರ ಮೇಲೆ ಕೂಡಾ ದೇಶ ದ್ರೋಹದ ಕೇಸನ್ನು ದಾಖಲಿಸಬೇಕೆಂದು ಹೇಳಿದ್ದಾರೆ. ಮಾದ್ಯಮಗಳೊಂದಿಗೆ ವಿಡಿಯೋ ಹೇಳಿಕೆಯನ್ನು ನೀಡಿರುವ ಅವರು ಎಡಪಂಥೀಯ ವಿಚಾರವೀಗ ದೇಶದ್ರೋಹದ ವಿಚಾರವಾಗಿ ಮಾರ್ಪಟ್ಟಿದ್ದು, ಈಗ ಅದು ಹಿಂದೂ ವಿರೋಧಿ ಹೋರಾಟವಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

ಆ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಎಲ್ಲರ ಮೇಲೆ ದೇಶದ್ರೋಹದ ಕೇಸನ್ನು ದಾಖಲಿಸಿಬೇಕು‌.‌ ಎಲ್ಲಾ ದೇಶದ್ರೋಹಿಗಳನ್ನು ಬಂಧಿಸಬೇಕು ಎಂದು ಹೇಳಿರುವ ಅನಂತ ಕುಮಾರ್ ಹೆಗ್ಡೆ ಅವರು ದೇಶದ್ರೋಹಿಗಳ ಆಡಂಬರ ಆಗಬಾರದೆಂದು ಆಕ್ರೋಶ ವ್ಯಕ್ತಪಡಿಸುತ್ತಾ ಎಲ್ಲರನ್ನೂ ಕೂಡಾ ದೇಶದ್ರೋಹದ ಆರೋಪದಲ್ಲಿ ಬಂಧಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here