ಪಾಕ್ ಪರ ಘೋಷಣೆಯ ಕೂಗಿ ಜೈಲು ವಾಸಿಯಾಗಿರುವ ಅಮೂಲ್ಯ ಲಿಯೋನಾಗೆ ವಿಚಾರಣೆಯ ವೇಳೆಯಲ್ಲಿ ರಾಜಾತಿಥ್ಯವನ್ನು ಪಡೆಯುತ್ತಿದ್ದಾಳೆ ಎನ್ನಲಾಗಿದೆ. ನ್ಯಾಯಾಂಗ ಬಂಧನದಲ್ಲಿ ವಿಚಾರಣೆಗೆ ಒಳಗಾಗಿರುವ ಈಕೆ ಪೋಲಿಸರ ಮುಂದೆ ಆಹಾರದ ವಿಷಯದಲ್ಲಿ ತನಗೆ ಇಷ್ಟವಾದ ಆಹಾರವನ್ನೇ ತರಿಸಿಕೊಡಬೇಕೆಂದು ಹಠ ಹಿಡಿದಿದ್ದಾಳೆ ಎನ್ನಲಾಗಿದೆ. ಅಲ್ಲದೆ ಪೋಲಿಸರು ಆಕೆಗೆ ತಾನು ಹೇಳಿದ ಆಹಾರವನ್ನು ನೀಡಿದಿದ್ದರೆ ತಾನು ಉಪವಾಸ ಮಾಡುವುದಾಗಿ ಪೋಲಿಸರಿಗೆ ಬೆದರಿಕೆ ಒಡ್ಡುತ್ತಿದ್ದಾಳೆ ಎಂದು ಕೂಡಾ ತಿಳಿದು ಬಂದಿದೆ. ಆಕೆ ಒಂದು ರೀತಿಯಲ್ಲಿ ಪೋಲಿಸರಿಗೆ ಕಾಟ ಕೊಡುತ್ತಿದ್ದಾಳೆ.

ಆಕೆಯ ಈ ವರ್ತನೆಗೆ ಬೇಸತ್ತ ಎಸ್ಐಟಿ ಪೊಲೀಸ್ ಕೂಡಾ ಆಕೆಯ ಬೇಡಿಕೆ ಇಟ್ಟ ಮಾಂಸಾಹಾರದ ಪದಾರ್ಥಗಳನ್ನು ತಂದು ಕೊಟ್ಟಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ‌. ವಿಧಿಯಿಲ್ಲದೆ ಅನಿವಾರ್ಯತೆ ಎಂಬಂತೆ ಆಕೆಗೆ ಇಷ್ಟ ತಿನಿಸುಗಳನ್ನು ಪೂರೈಸಲಾಗುತ್ತಿದೆ ಎನ್ನಲಾಗಿದೆ. ಆಕೆ ಇಂದು ತನಗೆ ಚಿಕನ್ ಪಾಪ್ ಕಾರ್ನ್ ಬೇಕೆಂದು ಹಠ ಹಿಡಿದಿದ್ದಳು ಎನ್ನಲಾಗಿದ್ದು, ಪೋಲಿಸರಿಂದಲೇ ಅದನ್ನು ತರಿಸಿ ತಿಂದಿದ್ದಾಳೆ ಎಂದು ತಿಳಿದು ಬಂದಿದೆ. ಇದು ಮಾತ್ರವೇ ಅಲ್ಲದೆ ನಿನ್ನೆಯ ದಿನ ಆಕೆಗೆ ಮಲಗಲು ಹಾಸಿಗೆಯನ್ನು ಕೂಡಾ ನೀಡಲಾಗಿತ್ತು ಎನ್ನಲಾಗಿದೆ.

ಆಕೆ ಪೋಲಿಸರ ಬಳಿ ನನಗಾಗಿ ಇಷ್ಟು ಪಹರೆ ಇಟ್ಟಿದ್ದೀರಾ, ನಾನೇನು ಸೆಲೆಬ್ರಿಟಿನಾ ಇದೆಲ್ಲಾ ನೋಡುತ್ತಿದ್ದರೆ ನನಗೆ ನಗು ಬರ್ತಿದೆ ಎಂದೆಲ್ಲಾ ಹೇಳುವ ಮೂಲಕ ತನ್ನ ವಿಚಾರಣೆಯನ್ನು ನಡೆಸುತ್ತಿರುವ ಪೋಲಿಸರ ಕುರಿತಾಗಿ ಆಕೆ ವ್ಯಂಗ್ಯವಾಡಿದ್ದಾಳೆ ಎಂದು ಕೂಡಾ ತಿಳಿದು ಬಂದಿದೆ. ಅಮೂಲ್ಯ ಲಿಯೋನಾ ಳ ಈ ವರ್ತನೆ ವಿಚಿತ್ರವೋ ಅಥವಾ ಇದು ಆಕೆಗೆ ತಾನು ಮಾಡಿರುವುದು ತಪ್ಪಲ್ಲ ಎನ್ನುವ ಮನೋಭಾವನೆ ಇರಬಹುದೇನೋ ಎನ್ನುವಂತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here