ಸಿಎಎ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ನಡೆದ ಪ್ರತಿಭಟನೆಯ ಕಾರ್ಯಕ್ರಮದಲ್ಲಿ ಪಾಕ್ ಪರವಾಗಿ ಘೋಷಣೆ ಕರೆದು ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ಅಮೂಲ್ಯ ಲಿಯೋನಾ ವಿಷಯವಾಗಿ ಅಂದು ಪ್ರತಿಭಟನೆ ಆಯೋಜನೆ ಮಾಡಿದ್ದವರು, ಅದರಲ್ಲೂ ವಿಶೇಷವಾಗಿ ಪಾದರಾಯನಪುರ ಕಾರ್ಪೊರೇಟರ್ ಆದ ಇಮ್ರಾನ್ ಪಾಷ ಅವರು ಹಾಗೂ ಇನ್ನೂ ಹಲವು ಸಿಎಎ ವಿರೋಧಿ ಹೋರಾಟಗಾರರು ಅಮೂಲ್ಯ ಗೆ ಈ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನವನ್ನು ನೀಡಲಾಗಿರಲಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ ಪೋಲಿಸ್ ತನಿಖೆಯಲ್ಲಿ ಬೇರೊಂದು ವಿಷಯವೇ ಹೊರ ಬಂದಿದೆ.

ಅಮೂಲ್ಯ ಲಿಯೋನಾಗೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅಧಿಕೃತವಾಗಿ ಆಹ್ವಾನ, ವಿಐಪಿ ಪಾಸ್ ಮತ್ತು ಸರದಿಯಲ್ಲಿ ಮಾತನಾಡಲು ಮೈಕ್ ಕೂಡಾ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಇದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸೆಯ್ಯದ್ ಆರ್ಯನ್ ಎನ್ನುವವರು ಅಮೂಲ್ಯಳನ್ನು ಆಕೆಯ ಸ್ನೇಹಿತೆಯ ಮುಖಾಂತರ ಸಂಪರ್ಕಿಸಿದಾಗ ಆಕೆ ಇದಕ್ಕೆ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಅಲ್ಲದೆ ಈ ಪ್ರತಿಭಟನೆಯಲ್ಲಿ ಅಸಾದುದ್ದೀನ್ ಓವೈಸಿ, ಹೆಚ್.ಡಿ.ದೇವೇಗೌಡರು ಭಾಗವಹಿಸಲಿದ್ದಾರೆಂಬ ಕಾರಣದಿಂದ ಗೊಂದಲ ಉಂಟಾಗದಿರಲಿ ಎಂದು ಅಮೂಲ್ಯಗೂ ಕೂಡಾ ಬ್ಯಾಡ್ಜ್ ನೀಡಿ ವೇದಿಕೆ ಮೇಲೆ ಅವಕಾಶ ನೀಡಲಾಗಿತ್ತು.

ಆದರೆ ಅಂದು ಪ್ರತಿಭಟನೆಯನ್ನು ಒಂದು ನಿರ್ದಿಷ್ಟ ಸಂಘಟನೆ ಅಥವಾ ವ್ಯಕ್ತಿ ಆಯೋಜನೆ ಮಾಡಿರಲಿಲ್ಲ. ಆದ ಕಾರಣ ಹಲವರು ಅವರ ವೈಯಕ್ತಿಕ ಸಂಪರ್ಕದ ಆಧಾರದ ಮೇಲೆ ಹಲವರು ತಮ್ಮ ತಮ್ಮ ವೈಯಕ್ತಿಕ ಸಂಪರ್ಕ ಆಧಾರದ ಮೇಲೆ ಭಾಷಣಕಾರರ ಹೆಸರನ್ನು ಪಟ್ಟಿ ಮಾಡಿ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಅಮೂಲ್ಯ ಲೊಯೋನಾ ಈ ಮೊದಲು ಕೂಡಾ ಬಿಜೆಪಿ, ಸಂಘ ಪರಿವಾರ ವಿರೋಧಿಸಿ ‘ತೀವ್ರವಾಗಿ ಭಾಷಣ ಮಾಡಿದ್ದ ಕಾರಣ ಆಕೆಯನ್ನು ಗಣ್ಯರ ಭಾಷಣ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ಹೇಳಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here