ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತಾಡುವ ಸಂದರ್ಭದಲ್ಲಿ ದೇಶದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಅವರು ಅಮೂಲ್ಯ ಲಿಯೋನಾ ಪಾಕ್ ಪರ ಘೋಷಣೆ ಮಾಡಿದ್ದ ಬಗ್ಗೆ ಕೂಡಾ ಮಾತನಾಡುತ್ತಾ ಆಕೆಯನ್ನು ತಾನು ಈ ಹಿಂದೆ ಕೂಡಾ ನೋಡಿರುವುದಾಗಿ, ಆಕೆಯು ತನ್ನದೇ ಆದ ತತ್ವ ಹಾಗೂ ವಿಶ್ವ ಮಾನವ ತತ್ವವನ್ನು ಹೊಂದಿದ್ದು, ಆ ಸಂದರ್ಭ ಏನು ಹೇಳಲು ಹೊರಟಿದ್ದಳೋ ಆ ಹೆಣ್ಣು ಮಗಳು ಎಂದು ಅಂದು ಅಮೂಲ್ಯ ಲಿಯೋನಾ ಘೋಷಣೆ ಕೂಗಿದ ವಿಚಾರದ ಬಗ್ಗೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವರು ಪಾಕಿಸ್ತಾನಕ್ಕೆ ಜೈ ಎನ್ನುವವರ ಪರವಾಗಿ ಯಾರೂ ಕೂಡಾ ಪ್ರೋತ್ಸಾಹವನ್ನು ನೀಡುವುದಿಲ್ಲ. ಆದರೆ ಧ್ವನಿ ಎತ್ತುವವರನ್ನು ಮೊಟಕುಗೊಳಿಸಬಾರದೆಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸಿಎಎ ಮತ್ತು ಎನ್.ಆರ್.ಸಿ ಗಳು ಇವು ಕಾಂಗ್ರೆಸ್ ನ ಇಶ್ಯೂ ಗಳಲ್ಲ. ಇದು ಇಡೀ ದೇಶದ ವಿಚಾರವಾಗಿದೆ. ಆದರೆ ಬಿಜೆಪಿಯವರಿಗೆ ಕಾಂಗ್ರೆಸ್ ಬಿಟ್ಟರೆ ಬೇರೇನೂ ಕಾಣುವುದಿಲ್ಲ ಎಂದು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ಹಿಂದೆ ಅಂದರೆ ಅಮೂಲ್ಯ ಲಿಯೋನಾ ಘೋಷಣೆ ಕೂಗಿದ ನಂತರ ಅದು ಮಾದ್ಯಮಗಳಲ್ಲಿ ಸುದ್ದಿಯಾದ ಸಂದರ್ಭದಲ್ಲಿ ಕೂಡಾ ಡಿ.ಕೆ.ಶಿವಕುಮಾರ್ ಅವರು ಅಮೂಲ್ಯ ಬಗ್ಗೆ ಮಾತನಾಡುವಾಗ ಆಕೆಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ವಿಚಾರ ಏನೇ ಆದರೂ ಅಮೂಲ್ಯ ಲಿಯೋನಾ ಬಗ್ಗೆ ತೀವ್ರ ಆಕ್ರೋಶವಂತೂ ವ್ಯಕ್ತವಾಗುತ್ತಿರುವುದು ಸತ್ಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here