ಕೊರೊನಾ ವೈರಸ್ ನಿಂದ ಜಗತ್ತಿನ ಹಲವು ರಾಷ್ಟ್ರಗಳು ಕಂಗೆಟ್ಟಿವೆ. ಮುಂಜಾಗ್ರತಾ ಕ್ರಮಗಳ ಜೊತೆಗೆ ಸೋಂಕು ತಗುಲಿರುವವರ ಚಿಕಿತ್ಸೆಯನ್ನು ಕೂಡಾ ಎಚ್ಚರಿಕೆಯಿಂದ ಮಾಡುತ್ತಿದ್ದು, ರೋಗ ನಿಯಂತ್ರಣಕ್ಕೆ ದೇಶಗಳು ಸಜ್ಜಾಗುತ್ತಿವೆ. ಭಾರತಕ್ಕೂ ಅಡಿಯಿಟ್ಟಿರುವ ಕೊರೊನಾ ವೈರಸ್ ನಿಂದ ಸೋಂಕು ಪೀಡಿತರ ಸಂಖ್ಯೆ, ಸೋಂಕಿನ ಶಂಕೆ ಇರುವವರ‌ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಪೀಡಿತರಿಗಾಗಿ ತಾತ್ಕಾಲಿಕ ಆಸ್ಪತ್ರೆಗಳು ಹಾಗೂ ವೆಂಟಿಲೇಟರ್ ಗಳ ಅಗತ್ಯ ಇರುವುದರಿಂದ ಅದಕ್ಕಾಗಿ ಒಂದು ನಿಧಿಯ ಅವಶ್ಯಕತೆ ಇದೆ ಎಂಬುದಾಗಿ ತಿಳಿಸಿರುವ ಉದ್ಯಮಿ ಆನಂದ ಮಹೀಂದ್ರಾ ತಮ್ಮ ಪೂರ್ಣ ವೇತನವನ್ನು ನಿಧಿ ಗಾಗಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಅಲ್ಲದೆ ಇತರೆ ಉದ್ಯಮಿ ಗಳನ್ನು ಕೂಡಾ ದೇಣಿಗೆ ನೀಡುವಂತೆ ಪ್ರೇರಣೆ ನೀಡಿರುವ ಅವರು, ಕೊರೊನಾ ಪೀಡಿತರ ಚಿಕಿತ್ಸೆಗಾಗಿ ತಮ್ಮ ಕಂಪನಿಗೆ ಸೇರಿರುವ ರೆಸಾರ್ಟ್‌ ಗಳನ್ನು ಬಳಸಿಕೊಳ್ಳಲು ಸರ್ಕಾರದ ಮುಂದೆ ಮನವಿಯೊಂದನ್ನು ಕೂಡಾ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಆನಂದ್ ಮಹೀಂದ್ರಾ ಅವರು. ತಾತ್ಕಾಲಿಕ ಆಸ್ಪತ್ರೆಗಳ ಸ್ಥಾಪನೆಗೆ ಸರ್ಕಾರಕ್ಕೆ ಹಾಗೂ ಸೇನೆಗೆ ನೆರವನ್ನು ಒದಗಿಸಲು ಯೋಜನಾ ತಂಡವು ಸದಾ‌ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.ಈ ವಿಷಯವನ್ನು ಅವರು ತಮ್ಮ ಟ್ವೀಟ್ ನಲ್ಲಿ ಕೂಡಾ ತಿಳಿಸಿದ್ದಾರೆ.

ಮಹೀಂದ್ರಾ ಗ್ರೂಪ್ ವೆಂಟಿಲೇಟರ್ ಗಳ ಉತ್ಪಾದನೆ ಕಡೆ ಗಮನ ಹರಿಸುವುದಾಗಿ ಹೇಳಿರುವ ಅವರು ರೋಗ ಹರಡುವಿಕೆ ಮೂರನೇ ಹಂತವನ್ನು ತಲುಪಿದ್ದು ಇದು ಸೋಂಕು ಪ್ರಕರಣಗಳಲ್ಲಿ ಹೆಚ್ಚಳವನ್ನು ಹಾಗೂ ಮೂಲಭೂತ ವೈದ್ಯಕೀಯ ಸೌಲಭ್ಯಗಳ ಮೇಲೆ‌ ಅಧಿಕ ಒತ್ತಡವನ್ನು ಹೇರಬಹುದು ಎಂದು ಕೂಡಾ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ಕೆಲವು ದಿನಗಳ ವರೆಗೆ ಲಾಕ್ ಡೌನ್ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here